ಅಗತ್ಯಕ್ಕಿಂತ ಹೆಚ್ಚು ಟೂತ್​ಪೇಸ್ಟ್​ ಬಳಸಿದ್ರೆ ಸಮಸ್ಯೆ ಎದುರಿಸಬೇಕಾದೀತು ಎಚ್ಚರ..!

ಟೂತ್​​ ಪೇಸ್ಟ್​.. ಒಂದಿನ ಟೂತ್​ ಪೇಸ್ಟ್​ನಿಂದ ಹಲ್ಲು ಉಜ್ಜಿಲ್ಲ ಅಂದ್ರೆ ಏನೋ ಒಂಥರ.. ದಿನನಿತ್ಯ ಉಲ್ಲುಜ್ಜುವ ಪೇಸ್ಟ್​ ಬೇಕೇಬೇಕು. ಹಾಗಂತ ಅದನ್ನ ಅತಿಯಾಗಿ ಬಳಸೋದ್ರಿಂದ ಆರೋಗ್ಯಕ್ಕೇ ಕುತ್ತು ತರುತ್ತೆ ಎಚ್ಚರ ಇರಲಿ. ಹೌದು, ಸಾಮಾನ್ಯವಾಗಿ ದೊಡ್ಡವರು ಅವಶ್ಯಕತೆ ಇದ್ದಷ್ಟು ಟೂತ್​ಪೇಸ್ಟ್​ ಬಳಸುತ್ತಾರೆ. ಆದರೆ ಮಕ್ಕಳು ಹಾಗಲ್ಲ.. ಕೆಲ ಮಕ್ಕಳಿಗಂತೂ ಟೂತ್​ಪೇಸ್ಟ್​ ತಿನ್ನೋದು ಅಂದರೆ ಬಹಳ ಇಷ್ಟ. ಆದರೆ ಮಕ್ಕಳು ಅತಿಯಾಗಿ ಟೂತ್​ಪೇಸ್ಟ್​ ಬಳಸೋದು ಒಳ್ಳೆಯದಲ್ಲ ಎಂದು ಸಿಡಿಸಿ (Centers for Disease Control and Prevention) ಎಚ್ಚರಿಕೆ ನೀಡಿದೆ.

ಸಿಡಿಸಿ ಇತ್ತೀಚೆಗೆ ಹೊಸ ಅಧ್ಯನವೊಂದನ್ನ ಕೈಗೊಂಡಿತ್ತು. 3 ರಿಂದ 6 ವರ್ಷದ 1,700 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಇವರಲ್ಲಿ 38% ರಷ್ಟು ಮಕ್ಕಳು ಅಗತ್ಯಕ್ಕಿಂತ ಹೆಚ್ಚು ಟೂತ್​ ಪೇಸ್ಟ್​ ಬಳಸುತ್ತಾರೆ ಎಂದು ಹೇಳಿದೆ. ಈ ವರದಿ ಪ್ರಕಾರ ಇದು ತಂದೆ ತಾಯಂದಿರು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ ಎನ್ನುತ್ತದೆ. ಯಾಕಂದ್ರೆ ಹೆಚ್ಚು ಟೂತ್​​ಪೇಸ್ಟ್​ ಸಮಾನ ದಂತ ಆರೋಗ್ಯವನ್ನು ಹೊಂದಿರುವುದಿಲ್ಲ. ನಿಮ್ಮ ಮಕ್ಕಳು ಅಗತ್ಯಕ್ಕಿಂತ ಹೆಚ್ಚು ಟೂತ್​ ಪೇಸ್ಟ್​ ಬಳಸುತ್ತಿದ್ದರೆ, ಅವರು ಹಲ್ಲಿನ ಫ್ಲೋರೋಸಿಸ್ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ ಎಂದು ಸಿಡಿಸಿ ಹೇಳುತ್ತದೆ.

ಫ್ಲೋರೈಡ್ ಎಂದರೇನು?
ಸ್ವಾಭಾವಿಕವಾಗಿ ಸಂಭವಿಸುವ ಮಿನರಲ್​ಗಳನ್ನ ಹೊಂದಿರುವ ಫ್ಲೋರೈಡ್​ಗಳನ್ನ ಟೂತ್​ಪೇಸ್ಟ್​ನಂತಹ ಹಲ್ಲಿನ ಉತ್ಪನ್ನಗಳಿಗೆ ಸೇರಿಸಲಾಗುತ್ತದೆ. ಯಾಕಂದ್ರೆ ಇದು ಹಲ್ಲಿನ ಕೊಳೆಯುವುದನ್ನ ತಪ್ಪಿಸಲು ಸಹಾಯ ಮಾಡುತ್ತದೆ. ಮತ್ತು ಫ್ಲಾಕ್ ಅನ್ನು ತೆಗೆದುಹಾಕುವುದರ ಮೂಲಕ, ಕಾರ್ಬ್​ ಆ್ಯಸಿಟ್​ ಉತ್ಪಾದಿಸುವ ಬ್ಯಾಕ್ಟೀರಿಯಾವನ್ನ ನಾಶಮಾಡುತ್ತದೆ. ದಂತ ಕವಚವನ್ನು ಎನಾಮೆಲ್​ ಮಾಡುತ್ತದೆ. ಫ್ಲೋರೈಡ್​ ಹಲ್ಲಿನ ಮೇಲ್ಮೈಯಲ್ಲಿ ಪದರ ರಚಿಸಿ ಕುಳಿಗಳಲ್ಲಿ ಕಡಿಮೆ ಮಾಡುತ್ತದೆ. ಆದರೆ ಇದನ್ನೇ ನುಂಗಿದ್ರೆ, ಹಲ್ಲಿನ ಫ್ಲೋರೋಸಿಸ್ ಬೆಳವಣಿಗೆಗೆ ಕಾರಣವಾಗಬಹುದು. ಆದರೆ ಹೆಚ್ಚಿನ ಫ್ಲೂರೈಡ್​ಗಳು ಮಕ್ಕಳ ಹಲ್ಲುಗಳ ದಂತ ಕವಚ ರಚನೆಗೆ ಹಾನಿಯನ್ನುಂಟುಮಾಡಬಹುದು ಎಂದು ಸ್ಟಡಿ ಹೇಳಿದೆ.

ಟೂ ಮಚ್ ಟೂತ್​ಪೇಸ್ಟ್​ ಅಡ್ಡಪರಿಣಾಮಗಳು
ನೀವು ಬಳಸುವ ಟೂತ್​ಪೇಸ್ಟ್​ ಸರಿಯಾಗಿ ಕೆಲಸ ಮಾಡಬೇಕು ಅಂದರೆ ಕನಿಷ್ಠ 2 ನಿಮಿಷವಾದ್ರು ಬೇಕಾಗುತ್ತದೆ. ಆದರೆ ಕೆಲವರು ಅರ್ಜೆಂಟ್​ನಲ್ಲಿ ಜಾಸ್ತಿ ಪೇಸ್ಟ್​ ಹಾಕೊಂಡು ಸರಿಯಾಗಿ ಹಲ್ಲು ಉಜ್ಜದೇ ಬಾಯಿ ತೊಳೆದುಕೊಂಡು ಬಿಡುತ್ತಾರೆ. ಮಕ್ಕಳು ತುಂಬಾ ಟೂತ್​ಪೇಸ್ಟ್​ ಕಾಕಿಕೊಂಡು ಹಲ್ಲುಜ್ಜುವ ವೇಳೆ ಅದನ್ನ ನುಂಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ, ಇದು ಹಲ್ಲಿನ ಫ್ಲೂರೋಸಿಸ್​ಗೆ ಕಾರಣವಾಗಬಹುದು. ಇದು ನಿಮ್ಮ ಹಲ್ಲು ಹೈಜಿನ್​ ಆಗಿಲ್ಲ ಆಂದರೆ ಅದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ಸ್ಕೆಲಿಟಲ್​ ಫ್ಲೂರೋಸಿಸ್ ಎಂಬುದು ಒಂದು ರೀತಿಯ ಮೂಳೆ ರೋಗ. ಇದು ಆಹಾರ ಅಥವಾ ಟೂತ್​ಪೇಸ್ಟ್​ ಮೂಲಕ ಹೆಚ್ಚಿನ ಪ್ರಮಾಣದ ಫ್ಲೋರೈಡ್​ ನಿಮ್ಮ ದೇಹವನ್ನ ಸೇರಿದಾಗ ಸಾಮಾನ್ಯವಾಗಿ ಈ ಕಾಯಿಲೆ ಬರುವ ಸಂಭವವಿರುತ್ತದೆ. ಆಸ್ಟಿಯೊಪೊರೋಸಿಸ್ ಇಂಟರ್​ನ್ಯಾಷನಲ್ ಜರ್ನಲ್​ನಲ್ಲಿ ಪ್ರಕಟವಾದ ಲೇಖನದ ಪ್ರಕಾರ ಅತಿಯಾದ ಬ್ಲಾಕ್​ ಟೀ ಮತ್ತು ಟೂತ್​ಪೇಸ್ಟ್​ ಸೇವನೆ ಹಲ್ಲಿನ ಸಮಸ್ಯೆಯನ್ನ ಹೆಚ್ಚಿಸುತ್ತದೆ ಎಂದು ವರದಿ ಮಾಡಿದೆ. ಅಷ್ಟೇ ಅಲ್ಲ. ಮಿತಿಮೀರಿದ ಫ್ಲೋರೈಡ್​ಗಳು ಥೈರಾಯ್ಡ್ ಗ್ರಂಥಿಗೆ ಹಾನಿ ಉಂಟುಮಾಡಬಹುದು, ಅಥವಾ ಹೈಪರ್​ ಥೈರಾಯ್ಡಿಸಮ್​ಗೆ ಕಾರಣವಾಗಬಹುದು.

ಎನ್ವಿರಾನ್ಮೆಂಟಲ್ ಹೆಲ್ತ್ ಪರ್ಸ್ಪೆಕ್ಟಿವ್​ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಅತಿಯಾದ ಫ್ಲೋರೈಡ್​ಗಳು ಮಕ್ಕಳಲ್ಲಿ ನರಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎನ್ನಲಾಗಿದೆ. ಅಲ್ಲದೇ ಮೊಡವೆ, ಮಧುಮೇಹ, ಅಧಿಕ ರಕ್ತದೊತ್ತಡ, ಬಾಲಕಿಯರ ಮುಂಚಿನ ಪ್ರೌಢಾವಸ್ಥೆ, ಇಮ್ಯೂನಿಟಿ ಕಡಿಮೆಯಾಗುವುದು, ಅಯೋಡಿನ್ ಕೊರತೆ, ಮೂಳೆ ದೌರ್ಬಲ್ಯ, ಮುಂತಾದ ಇತರ ಆರೋಗ್ಯ ಸಮಸ್ಯೆಗಳಿಗೆ ಸಹ ಫ್ಲೋರೈಡ್ ಕಾರಣವಾಗುತ್ತದೆ ಎನ್ನಲಾಗಿದೆ.

ಪೋಷಕರು ಏನು ಮಾಡಬೇಕು?
ಬ್ಲಾಕ್ ಟೀ, ಚಿಪ್ಪುಮೀನು, ವೈನ್, ಗ್ರೀನ್​ ಟೀ, ಬಾಯಿಲ್ಡ್​ ರೈಸ್​, ಮೊಸರು, ಮತ್ತು ಬ್ರೆಡ್​ಳಲ್ಲಿ ಸಣ್ಣ ಪ್ರಮಾಣದಲ್ಲಿ ಫ್ಲೋರೈಡ್ ಇರುತ್ತದೆ. ಆದರೆ ಇದು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಆದರೆ ಇದೇ ಆಹಾರವನ್ನ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳನ್ನ ಬೀರುತ್ತದೆ. ಇನ್ನು 6 ತಿಂಗಳವರೆಗಿನ ಪುಟ್ಟ ಮಕ್ಕಳಿಗೆ ಟೂತ್​ಪೇಸ್ಟ್​ ಅಗತ್ಯವಿಲ್ಲ. ಮಕ್ಕಳು ಹಲ್ಲು ಉಜ್ಜುವಾಗ ಪೇಸ್ಟ್​ ನುಂಗದಂತೆ ಪೋಷಕರು ಜಾಗ್ರತೆ ವಹಿಸಬೇಕು

Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv