‘ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ’

ಗದಗ: ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಗಿದೆ ಎಂದು ಗದಗನ ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಲಿಂಗಾಯತ ಧರ್ಮ ಮತ್ತು ಚಿಂತನಾ ಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಲಿಂಗಾಯತರನ್ನು ಹಿಂದೂ ಧರ್ಮದಿಂದ ಹೊರಗೆ ಹೋಗಬಾರದು ಅನ್ನೋ ನಿಟ್ಟಿನಲ್ಲೇ ಪ್ರಯತ್ನ ಮಾಡ್ತಾರೆ. ಪ್ರತ್ಯೇಕ ಲಿಂಗಾಯತ ಧರ್ಮದಿಂದ ಬಿಜೆಪಿಗೆ ಹಾನಿಯಿಲ್ಲ ಅದನ್ನು ಅವರು ತಿಳಿದುಕೊಳ್ಳಬೇಕು. ಜೈನ, ಬೌದ್ಧರು ಮೊದಲು ಹಿಂದೂಗಳಾಗಿದ್ರು, ಅವರೀಗ ಹಿಂದೂ ಧರ್ಮದಿಂದ ಹೊರಹೋಗಿದ್ದಾರೆ.

ಅದರಿಂದ ಹಿಂದೂ ಧರ್ಮಕ್ಕೆ ಏನು ಹಾನಿಯಾಗಿದೆ? ಅಂತಾ ಶ್ರೀಗಳು ಪ್ರಶ್ನಿಸಿದ್ದಾರೆ. ಇನ್ನೂ ರಾಷ್ಟ್ರದ ಅಖಂಡತೆಗೆ, ಏಕತೆಗೆ ಹಾನಿಯಾಗಲ್ಲ. ಲಿಂಗಾಯತ ಧರ್ಮಕ್ಕೆ ಹೆಚ್ಚಿನ ಆಧಾರಗಳು ಇವೆ. ಲಿಂಗಾಯತರು ದೇಶ ಪ್ರೇಮಿಗಳು ದೇಶ ದ್ರೋಹಿಗಳಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಯಾವತ್ತೂ ನಿಲ್ಲಲ್ಲ. ಪ್ರತಿ ಗ್ರಾಮಗಳಲ್ಲೂ ಲಿಂಗಾಯತ ಧರ್ಮದ ಅರಿವು ಮೂಡಿಸುವ ಕೆಲಸ ನಡೆದಿದೆ. ಕೇಂದ್ರ ಸರ್ಕಾರ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಸಿದ್ದರಾಮ ಶ್ರೀಗಳು ಒತ್ತಾಯಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv