ನಾಳೆ ಬೆಂಗಳೂರಲ್ಲಿ ಮೋದಿ ಮೇನಿಯಾ, ಅಶೋಕ್ ನೇತೃತ್ವದಲ್ಲಿ ಭರದ ಸಿದ್ಧತೆ

ಬೆಂಗಳೂರು: ಕೊಪ್ಪಳದಲ್ಲಿ ಇಂದು ಸಂಗಣ್ಣ ಕರಡಿ ಪರ ಭರ್ಜರಿ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ನಾಳೆ ಬೆಂಗಳೂರಲ್ಲಿ ಮತಬೇಟೆ ನಡೆಸಲಿದ್ದಾರೆ. ಅರಮನೆ ಮೈದಾನದಲ್ಲಿ ನಾಳೆ ಸಂಜೆ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ. ಸಮಾವೇಶ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ತಯಾರಿ ನಡೆಸುತ್ತಿದ್ದು, ರಾಜ್ಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಆರ್​.ಅಶೋಕ್ ನೇತೃತ್ವದಲ್ಲಿ ತಯಾರಿ ನಡೆಯುತ್ತಿದೆ. ಅದ್ರಂತೆ ಪೂರ್ವಭಾವಿ ಸಿದ್ಧತೆಗಳನ್ನ ಆರ್​.ಅಶೋಕ್ ಪರಿಶೀಲನೆ ನಡೆಸಿದರು. ಅರಮನೆ ಮೈದಾನಕ್ಕೆ ಭೇಟಿ ನೀಡಿದ ಆರ್​.ಅಶೋಕ್, ಸ್ಥಳವನ್ನ ಪರಿಶೀಲನೆ ನಡೆಸಿದರು. ಇನ್ನು ಇವರಿಗೆ  ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಸಾಥ್ ನೀಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv