ಮೊದಲ ಹಂತದ ಚುನಾವಣೆ, ನಾಳೆ ಸಂಜೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ

ಬೆಂಗಳೂರು: ಇದೇ ಏಪ್ರಿಲ್ 18 ರಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಳೆಯೇ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಪ್ರಚಾರದಲ್ಲಿ ತೊಡಗಿರುವ ಕ್ಷೇತ್ರದ ಮತದಾರರಲ್ಲದವರೆಲ್ಲಾ  ನಾಳೆ ಸಂಜೆ ವೇಳೆಗೆ ಕ್ಷೇತ್ರ ಬಿಟ್ಟು ಹೊರಬರಬೇಕು. ಈ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರದಲ್ಲಿ ತೊಡಗಿರು ದರ್ಶನ್ ಮತ್ತು ಯಶ್ ವಾಪಾಸ್ಸಾಗಲಿದ್ದಾರೆ. ನಾಳೆ ಮಂಡ್ಯದಲ್ಲಿ ನಡೆಯಲಿರುವ ಸುಮಲತಾ ಅವರ ಬೃಹತ್​ ಸಮಾವೇಶ ಮುಗಿಸಿ ವಾಪಸ್ಸಾಗಲಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv