ನಾಳೆಯಿಂದ ಸಿಇಟಿ ಕೌನ್ಸ್​ಲಿಂಗ್​ ಆರಂಭ: ಡಾ. ಎಸ್​​. ನಾಗಮಣಿ

ಶಿವಮೊಗ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಶಿವಮೊಗ್ಗದ ಜೆಎನ್​ಎನ್​ಸಿಇ​ ಎಂಜಿನಿಯರಿಂಗ್​ ಕಾಲೇಜಿನಲ್ಲಿ ಇಂದು ಸಿಇಟಿ ಕೌನ್ಸ್​ಲಿಂಗ್​ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಸಿಇಟಿಯ ಪ್ರವೇಶ ನಾಳೆಯಿಂದ ಜೂ.26ರ ತನಕ ನಡೆಯಲಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಕಾರ್ಯಾಗಾರ ನಡೆಸಲಾಯಿತು. ಕೆಇಎ ನಡೆಸಿದ ಸಿಇಟಿ ಪರೀಕ್ಷೆಗೆ ಹಾಜರಾಗಿ ಱಂಕ್​ ಪಡೆದವರು ಸಿಇಟಿ ಕೌನ್ಸ್​​ಲಿಂಗ್​ನಲ್ಲಿ ಭಾಗವಹಿಸಬಹುದು. ಅಲ್ಲದೇ, ಸಿಇಟಿ ಜತೆಗೆ ನೀಟ್ ಪರೀಕ್ಷೆ ಬರೆದವರು ಆಗಮಿಸಬಹುದು ಎಂದು ನೋಡಲ್​ ಅಧಿಕಾರಿ ಡಾ. ಎಸ್​. ನಾಗಮಣಿ ತಿಳಿಸಿದರು.
ಕೇವಲ ನೀಟ್ ಪರೀಕ್ಷೆ ಮಾತ್ರ ಬರೆದವರಿಗೆ ಪ್ರತ್ಯೇಕವಾಗಿ ದಾಖಲೆ ಪರಿಶೀಲನೆ ನಡೆಯಲಿದೆ. ದಾಖಲೆ ಪರಿಶೀಲನೆ ಮುಗಿದ ಮೇಲೆ ತಮಗೆ ಬೇಕಾದ ಕೋರ್ಸ್​ನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂಕ ಪಟ್ಟಿಯ ಮೂಲ ದಾಖಲೆಯ ಜತೆ ಒಂದು ನಕಲು ಪ್ರತಿಯನ್ನು ಗೆಜೆಟೆಡ್ ಅಧಿಕಾರಿ ಸಹಿಯೊಂದಿಗೆ ತರಬೇಕು. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ 16 ಕೇಂದ್ರಗಳಲ್ಲಿ ದಾಖಲೆ ಪರಿಶೀಲನೆ ನಡೆಯಲಿದೆ. ವಿದ್ಯಾರ್ಥಿಗಳು ತಮಗೆ ಸಮೀಪದ ಕೇಂದ್ರಕ್ಕೆ ತೆರಳಿ ದಾಖಲೆ ಪರಿಶೀಲನೆಯಲ್ಲಿ ಭಾಗವಹಿಸಹುದು ಎಂದು ಡಾ. ಎಸ್​. ನಾಗಮಣಿ ಹೇಳಿದರು.
ಕೇಂದ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182- 267916 ಸಂಪರ್ಕಿಸಬಹುದು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv