ಪ್ರಾಣ ಸ್ನೇಹಿತನ ಸಿನಿಮಾಗೆ ರಕ್ಷಿತ್ ಶೆಟ್ಟಿ ಸಾಥ್

ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿರುವ ಡಿಟೆಕ್ಟಿವ್ ಕಾಮಿಡಿ ಶೈಲಿಯ ಬೆಲ್ ಬಾಟಂ ಚಿತ್ರದ ಹೊಸ ಟೀಸರ್ ನಾಳೆ ಬೆಳಗ್ಗೆ 10 ಗಂಟೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಲಿದೆ. ವಿಶೇಷ ಅಂದ್ರೆ ಈ ಟೀಸರ್‌ನ ಬಿಡುಗಡೆ ಮಾಡ್ತಿರೋದು ರಿಷಬ್‌ ಶೆಟ್ಟಿ ಸ್ನೇಹಿತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಪೋಸ್ಟರ್ ಮತ್ತು ಮೇಕಿಂಗ್ ಮೂಲಕ ಸದ್ದು ಮಾಡ್ತಿದ್ದ ಚಿತ್ರದ ‘ಡಿಟೆಕ್ಟಿವ್ ದಿವಾಕರ್’ ಪಾತ್ರ ಪರಿಚಯ ಮಾಡೋ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಒಂದು ಲಕ್ಷ ಮಂದಿ ವೀಕ್ಷಿಸಿದ್ರು.

ಫಸ್ಟ್‌ ಟೈಮ್ ಹೀರೋ ರಿಷಬ್‌ಗೆ ರಕ್ಷಿತ್‌ ಸಾಥ್
ಅಂದ್ಹಾಗೆ, ಇದುವರೆಗೂ ನಿರ್ದೇಶಕನ ಕ್ಯಾಪ್ ತೊಟ್ಟಿದ್ದ ರಿಷಬ್ ಶೆಟ್ಟಿ ಈಗ ಚೊಚ್ಚಲ ಬಾರಿಗೆ ಹೀರೋ ಆಗಿ ಅದೂ ಡಿಫ್ರೆಂಟ್‌ ಪಾತ್ರದಲ್ಲಿ ಎಂಟ್ರಿ ಕೊಡ್ತಿದ್ದಾರೆ. ಜಯತೀರ್ಥ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರಿಷಬ್ ಶೆಟ್ಟಿಗೆ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ಹಾಗೂ ರಕ್ಷಿತ್‌ ಶೆಟ್ಟಿ ಮೊದಲಿಂದಲೂ ಕ್ಲೋಸ್ ಫ್ರೆಂಡ್ಸ್. ಸಾಮಾಜಿಕ ಜಾಲತಾಣಗಳಲ್ಲಂತೂ ರಕ್ಷಿತ್‌ ಅಭಿನಯಕ್ಕೆ ರಿಷಬ್ ಶೆಟ್ಟಿ ಸಾಥ್‌ ನೀಡ್ತಿದ್ರೆ, ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾಗಳಿಗೆ ರಕ್ಷಿತ್ ಸಾಥ್ ಇರುತ್ತೆ. ಹೀಗೆ, ಪರಸ್ಪರ ಸಿನಿಮಾಗಳಿಗೆ ಪ್ರೋತ್ಸಾಹ, ಪ್ರಚಾರವನ್ನ ಕೊಡ್ತಾ ಒಬ್ಬರಿಗೊಬ್ಬರು ಹೆಗಲಾಗಿದ್ದಾರೆ.

ಬೆಲ್‌ ಬಾಟಂ ಚಿತ್ರ 80ರ ದಶಕದ ಡಿಟೆಕ್ಟಿವ್ ಕಥೆಯಿರೋ ಹಾಸ್ಯ, ಪ್ರೀತಿಯ ಒಂದು ಮೆಸೇಜ್ ಕೋಡೋ ಸಿನಿಮಾ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ ಕಶ್ಯಪ್ ಛಾಯಾಗ್ರಹಣ ಇದೆ.