ಸುತ್ತಲೂ ಅಕ್ವೇರಿಯಂ, ಮಧ್ಯದಲ್ಲಿ ಟಾಯ್ಲೆಟ್..!

ಜಪಾನ್​: ಸೋಷಿಯಲ್ ಮೀಡಿಯಾದಲ್ಲಿ ಜನಕ್ಕೆ ಅದೇನೇನು, ಯಾಕೆ ಇಷ್ಟವಾಗುತ್ತೆ ಅಂತ ಗೊತ್ತಾಗೋದೇ ಇಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್ ಸೃಷ್ಟಿಸಿರೋದು ಒಂದು ಟಾಯ್ಲೆಟ್.

ಟಾಯ್ಲೆಟ್ ಅಂತ ಶಾಕ್ ಆಗ್ಬೇಡಿ. ಯಾಕಂದ್ರೆ ಈ ಟಾಯ್ಲೆಟ್​ನ ಸ್ಪೆಷಾಲಿಟಿಯೇ ಅಂಥದ್ದು. ಅದೇನಿದೆ ಈ ಟಾಯ್ಲೆಟ್​ನಲ್ಲಿ ಅಂಥ ಸ್ಪೆಷಲ್ ಅಂದ್ರೆ, ಈ ಟಾಯ್ಲೆಟ್ ನಿರ್ಮಾಣವಾಗಿರುವ ಜಾಗದಲ್ಲಿ ಮಾಡಿರುವ ಡೆಕೋರೇಷನ್. ಸಾಮಾನ್ಯವಾಗಿ ಮನೆಗಳಲ್ಲಿ ಅಥವಾ ಯಾವುದೇ ಕಟ್ಟಡವಿರಲಿ, ಶೌಚಾಲಯವನ್ನ ಎಲ್ಲಿ ಕಟ್ಟುತ್ತಾರೆ. ಕಟ್ಟಡದ ಒಳಗೆ ಅಥವಾ ಮನೆಯ ಹಿಂದೆಯೋ, ಮುಂದೆಯೋ ಇರುವ ಖಾಲಿ ಜಾಗದಲ್ಲಿ. ಇನ್ನು, ಕಟ್ಟಡ ಕಟ್ಟಿಸುವವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಒಂದಷ್ಟು ಅಲಂಕಾರವನ್ನೂ ಈ ಟಾಯ್ಲೆಟ್​ಗೆ ಮಾಡಿರ್ತಾರೆ. ಸದ್ಯ ಈ ಟಾಯ್ಲೆಟ್ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗಿರೋದು ಕೂಡ ತನ್ನ ಸುತ್ತ ಮಾಡಿರುವ ಅಲಂಕಾರದಿಂದ.

ಜಪಾನ್​ನ ಅಕಾಶಿಯಲ್ಲಿರುವ ಹಿಪೊಪೊ ಪಾಪಾ ಎನ್ನುವ ಕೆಫೆಯಲ್ಲಿ ಬೃಹತ್ ಅಕ್ವೇರಿಯಂನ ಮಧ್ಯೆ ಒಂದು ಟಾಯ್ಲೆಟ್ ನಿರ್ಮಿಸಲಾಗಿದೆ. ಸುಮಾರು 12 ವರ್ಷಗಳಿಂದ ಈ ಟಾಯ್ಲೆಟ್​ಬಳಸಲಾಗುತ್ತಿದೆ. ಈ ಟಾಯ್ಲೆಟ್ ಸುತ್ತ ಅಕ್ವೇರಿಯಂ ನಿರ್ಮಿಸೋಕೆಂದೇ ಇದರ ಮಾಲೀಕರು ಬರೊಬ್ಬರಿ 2 ಲಕ್ಷ ಪೌಂಡ್ ಅಂದ್ರೆ, 1 ಕೋಟಿ 80 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ. ಇನ್ನು, ಈ ಟಾಯ್ಲೆಟ್​ ಕೇವಲ ಮಹಿಳೆಯರು ಮಾತ್ರ ಬಳಸಬೇಕು. ಪುರುಷ ಗ್ರಾಹಕರು ಈ ಟಾಯ್ಲೆಟ್​ ನೋಡಬೇಕು ಅಂತ ಬಯಸಿದ್ರೆ, ಆ ಸಮಯದಲ್ಲಿ ಯಾರೂ ಟಾಯ್ಲೆಟ್ ಬಳಸುತ್ತಿಲ್ಲ ಅಂತಾದ್ರೆ, ಕೆಫೆಯ ಸಿಬ್ಬಂದಿಯೇ ಗ್ರಾಹಕರನ್ನ ಕರೆದುಕೊಂಡು ಹೋಗಿ ತೋರಿಸ್ತಾರಂತೆ. ಸದ್ಯ ಈ ಟಾಯ್ಲೆಟ್​ ನೋಡಿದೋರೆಲ್ಲಾ, ಇದರ ಫೋಟೋ ತೆಗೆದು, ನೋಡಿ ಹೆಂಗಿದೆ ಅಂತ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv