ಮಗುವಿನಿಂದ ಲಾಕ್​ ಆಯ್ತು ಐಪ್ಯಾಡ್​, ಓಪನ್​ ಆಗೋಕೆ ಬೇಕು 48 ವರ್ಷ..!

ವಾಷಿಂಗ್ಟನ್​: ಎಲೆಕ್ಟ್ರಾನಿಕ್​ ವಸ್ತುಗಳೇ ಹಾಗೆ ಅವು ಯಾವಾಗ ಹೇಗೆ ವರ್ಕ್​ ಆಗ್ತವೆ ಅನ್ನೋದನ್ನ ಹೇಳೋದಕ್ಕೆ ಆಗಲ್ಲ. ಯಾವಾಗ ಕೈ ಕೊಡ್ತವೆ ಅನ್ನೋದನ್ನ ಊಹಿಸೋಕು ಆಗಲ್ಲ. ಅಮೇರಿಕಾದಲ್ಲಿ ಜರ್ನಲಿಸ್ಟ್​ವೊಬ್ಬರ ಐಪ್ಯಾಡ್​​ ಮುಂದಿನ 48 ವರ್ಷಗಳವರೆಗೆ ಲಾಕ್​ ಆಗಿದೆ. ಅಂದ್ರೆ 48 ವರ್ಷದ ನಂತರವಷ್ಟೇ ಅದನ್ನ ಓಪನ್​ ಮಾಡಲು ಸಾಧ್ಯ. ಅಲ್ಲಿಯವರೆಗೂ ಅದರ ಸರಿಯಾದ ಪಾಸ್​ವರ್ಡ್​ ಹಾಕಿದ್ರೂ ಅದು ಓಪನ್​ ಆಗಲ್ಲವಂತೆ.

ಇವನ್​ ಒಸ್ನೋಸ್ ಎಂಬ ಜರ್ನಲಿಸ್ಟ್​ ಸಾಮಾನ್ಯವಾಗೇ ಐಪ್ಯಾಡ್​ಗೆ ಲಾಕ್​ ಇಟ್ಟಿದ್ದರು. ಒಮ್ಮೆ ಹೊರಗೆ ಹೋಗುವಾಗ​ ಅದನ್ನ ಮನೆಯಲ್ಲೇ ಬಿಟ್ಟು ಹೋಗಿದ್ದರು. ಇವರ 3 ವರ್ಷದ ಮಗು ಆಟ ಆಡುವಾಗ ಐ ಪ್ಯಾಡ್​ ನೋಡಿ, ಅದರ ಲಾಕ್​ ಓಪನ್​ ಮಾಡಲು ಯತ್ನಿಸಿದೆ. ಪಾಸ್​ವರ್ಡ್​ ಗೊತ್ತಿಲ್ಲದಿದ್ದರೂ ಪದೇ ಪದೇ ರಾಂಗ್​ ಪಾಸ್​​ವರ್ಡ್​ ಟ್ರೈ ಮಾಡಿದೆ. ಪರಿಣಾಮ ಐಪ್ಯಾಡ್​ ಲಾಕ್​ ಆಗಿದ್ದು ಓಪನ್​ ಆಗಲು 25,536,442 ನಿಮಿಷ ಸಮಯ ಕೇಳುತ್ತಿದೆ.

ಲಾಕ್​ ಆಗಿರುವ ಐಪ್ಯಾಡ್​​ನ​ ಸರಿಯಾದ ಪಾಸ್​ವರ್ಡ್​ ಕೊಟ್ಟರೂ ಓಪನ್​ ಆಗುತ್ತಿಲ್ಲ. ಅಂದ್ರೆ 2,55,36,442 ನಿಮಿಷಗಳನ್ನ ದಿನಗಳಿಗೆ ಕನ್ವರ್ಟ್​ ಮಾಡಿದ್ರೆ ಬರೋಬ್ಬರಿ ಅರ್ಧ ಶತಕವಾಗುತ್ತೆ. ಅಂದ್ರೆ 48 ವರ್ಷ 59 ದಿನ ಕಾಯಬೇಕಾಗುತ್ತೆ. ಈ ಕುರಿತು ನ್ಯೂಯಾರ್ಕ್​ ಡೈಲಿ ನ್ಯೂಸ್​ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಇವನ್​ ಒಸ್ನೋಸ್​ ಅವರ ಐಪ್ಯಾಡ್​ ಲಾಕ್​ ಓಪನ್​ ಆಗಬೇಕಾದ್ರೆ 2067 ರವರೆಗೆ ಕಾಯಬೇಕು ಅಂತಾ ಹೇಳಿದೆ.

ಇನ್ನು ಈ ಬಗ್ಗೆ ಐಪ್ಯಾಡ್​ ಮೇಕರ್ಸ್​ ಸಲಹೆ ನೀಡಿದ್ದು, ಐಪ್ಯಾಡ್​ ಸೆಟ್ಟಿಂಗ್ಸ್​ ಅನ್ನ ರೀ ಸ್ಟೋರ್ ಮಾಡಿದ್ರೆ ಸರಿ ಹೋಗುತ್ತೆ. ಆದ್ರೆ ಅದರಲ್ಲಿ ಸ್ಟೋರ್​ ಆಗಿದ್ದ ಡಾಟಾ ಡಿಲೀಟ್​ ಆಗುತ್ತೆ ಅಂತಾ ತಿಳಿಸಿದ್ದಾರೆ.
ಈ ಬಗ್ಗೆ ಇವನ್​ ಒಸ್ನೋಸ್​ ತನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಫೇಕ್​ ಅಂತಾ ನಿಮಗೆ ಅನ್ನಿಸ ಬಹುದು ಆದ್ರೆ ಇದು ಫೇಕ್​ ಅಲ್ಲಾ ನನ್ನ ಐಪ್ಯಾಡ್​​. ನನ್ನ ಮೂರು ವರ್ಷದ ಮಗು ಇದರ ಲಾಕ್​ ಓಪನ್​ ಮಾಡಲು ಪದೇ ಪದೇ ರಾಂಗ್​ ಪಾಸ್ವರ್ಡ್​ ಟ್ರೈ ಮಾಡಿದ ಪರಿಣಾಮ ಲಾಕ್​ ಆಗಿದೆ ಅಂತಾ ಅದರ ಫೋಟೋ ಶೇರ್​ ಮಾಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv