ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಇಂದು ಚುನಾವಣೆ

ಕಲಬುರ್ಗಿ: ವಿಧಾನ‌‌ ಪರಿಷತ್​ನ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ಮತದಾನ ನಡೆಯಲಿದೆ. ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳನ್ನೊಳಗೊಂಡ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ, ಹರಪನಹಳ್ಳಿ ತಾಲೂಕು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 10 ಜನ ಅಭ್ಯರ್ಥಿಗಳು ‌ಕಣಕ್ಕಿಳಿದಿದ್ದು, ಬಿಜೆಪಿಯಿಂದ ಕೆ.ಬಿ.ಶ್ರೀನಿವಾಸ್, ಕಾಂಗ್ರೆಸ್ ನಿಂದ ಚಂದ್ರಶೇಖರ ಪಾಟೀಲ್ ಹುಮ್ನಾಬಾದ್‌‌, ಜೆಡಿಎಸ್‌ನಿಂದ ಪ್ರತಾಪ್ ರೆಡ್ಡಿ, ಕನ್ನಡ ಚಳವಳಿ‌ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಒಟ್ಟು 82,054 ಮತದಾರರಿದ್ದು, ಕಲಬುರಗಿ – 23,145, ಬಳ್ಳಾರಿ – 20,737, ರಾಯಚೂರು 12,007, ಬೀದರ್ 11,416, ಕೊಪ್ಪಳ 8,338 ಯಾದಗಿರಿ 5159, ಹರಪನಹಳ್ಳಿಯಲ್ಲಿ 1252 ಮತದಾರರಿದ್ದಾರೆ. ಒಟ್ಟು 157 ಮತದಾನ ಕೇಂದ್ರಗಳನ್ನು ತೆರಯಲಾಗಿದ್ದು, ಜೂನ್ 12 ರಂದು ಕಲಬುರ್ಗಿ ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಮತಎಣಿಕೆ ನಡೆಯಲಿದ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv