ಮಂಡ್ಯದಲ್ಲಿಂದು ಅಂಬರೀಶ್ ಜನ್ಮ ದಿನೋತ್ಸವ ಕಾರ್ಯಕ್ರಮ ಆಯೋಜನೆ

ಮಂಡ್ಯ: ಮಂಡ್ಯದಲ್ಲಿಂದು ಅಂಬರೀಶ್ ಜನ್ಮ ದಿನೋತ್ಸವ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ. ಇದರ ಜತೆಗೆ ಸುಮಲತಾ ಅಂಬರೀಶ್ ಗೆಲುವಿನ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ನಗರದಾದ್ಯಂತ ಕಾಂಗ್ರೆಸ್ ಮುಖಂಡರ ಭಾವಚಿತ್ರ ರಾರಾಜಿಸುತ್ತಿವೆ. ಬೃಹತ್ ಫ್ಲೆಕ್ಸ್ ಬಂಟಿಂಗ್ಸ್‌ಗಳಲ್ಲಿ ಸಿದ್ದರಾಮಯ್ಯ, ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ ಸೇರಿದಂತೆ ಉಭಯಪಕ್ಷಗಳ ಮುಖಂಡರ ಭಾವಚಿತ್ರ ಕಂಡು ಬಂದಿವೆ. ಮದ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ವಿಜಯೋತ್ಸವ ಆಯೋಜಿಸಲಾಗಿದೆ. ಈ ಮೂಲಕ ಸುಮಲತಾ ಗೆಲುವಿನ ರಣಕಹಳೆ ಮೊಳಗಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಕಾಳಿಕಾಂಭ ದೇವಿಗೆ ಸುಮಲತಾ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ನಟರಾದ ದರ್ಶನ್ ,ಯಶ್ , ದೊಡ್ಡಣ್ಣ, ಪುತ್ರ ಅಭಿಷೇಕ್‌ಗೌಡ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಾಥ್ ನೀಡಲಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv