ಇಲಿಗಳಂತೆ ಪಕ್ಷ ಬಿಡ್ತಿದ್ದಾರಂತೆ ಟಿಎಂಸಿ ನಾಯಕರು..!

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಪಕ್ಷದ ಟೈಮ್ ಸರಿ ಇದ್ದಂತೆ ಕಾಣಿಸುತ್ತಿಲ್ಲ. ಒಂದೆಡೆ ಲೋಕಸಭೆ ಚುನಾವಣೆಯಲ್ಲಿ ದೀದಿ ಭಾರೀ ಮುಖಭಂಗ ಅನುಭವಿಸಿದ್ದಾರೆ. ಅತೀ ಹೆಚ್ಚು ಸ್ಥಾನಗಳನ್ನ ಟಿಎಂಸಿ ಗಳಿಸಿದ್ರೂ, ರಾಜ್ಯದಲ್ಲಿ ಕಮಲ ಜೋರಾಗಿಯೇ ಅರಳಿದೆ. ಅಲ್ಲದೆ, ನಿನ್ನೆ ಮೂವರು ಶಾಕಸರು, 60 ಕೌನ್ಸಿಲರ್​ಗಳು ಪಕ್ಷ ತೊರೆದು ಟಿಎಂಸಿಗೆ ಶಾಕ್ ಕೊಟ್ಟಿದ್ದರು. ಇದೀಗ ಮತ್ತೊಂದು ಅಘಾತ ದೀದಿಗೆ ಎದುರಾಗಿದೆ.

ಒಬ್ಬೊಬ್ಬರೇ ನಾಯಕರು ಕೈ ಕೊಡ್ತಿರೋದ್ರಿಂದ, ಮಮತಾ ಬ್ಯಾನರ್ಜಿ ತಮ್ಮ ಸಚಿವ ಸಂಪುಟವನ್ನ ಪನಾರಚನೆ ಮಾಡಿದ್ದಾರೆ. ಹಲವು ಸಚಿವರಿಗೆ ಹೆಚ್ಚುವರಿ ಖಾತೆಗಳನ್ನ ನೀಡಲಾಗಿದೆ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕೋಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಅಂತ ಟಿಎಂಸಿ ಹೇಳಿದೆ. ಆದ್ರೆ, ಇದರ ಹಿಂದೆ ಪಕ್ಷವನ್ನ, ನಾಯಕರನ್ನ ಉಳಿಸಿಕೊಳ್ಳುವ ತಂತ್ರ ಇದೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಮತ್ತೊಂದೆಡೆ ಬಿಜೆಪಿ ವಿರುದ್ಧ ಹಾಗೂ ತಮ್ಮ ಪಕ್ಷ ತೊರೆದವರ ವಿರುದ್ಧ ಹರಿಹಾಯ್ದಿರುವ ಟಿಎಂಸಿ, ಹಡಗು ಅಪಾಯದಲ್ಲಿದೆ ಅಂತ ಅಂದುಕೊಂಡು ಇಲಿಗಳಂತೆ ಕೆಲವರು ಬಿಜೆಪಿ ಸೇರುತ್ತಿದ್ದಾರೆ ಅಂತ ಟೀಕಿಸಿದೆ.

ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನ ಗಮನಿಸುತ್ತಿರುವ ಬಿಜೆಪಿ ಹೈಕಮಾಂಡ್, ಅವಧಿಗೂ ಮೊದಲೇ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯನ್ನ ನಿರೀಕ್ಷಿಸುತ್ತಿದೆ. ಅಲ್ಲದೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಸರ್ಕಾರ ರಚಿಸೋ ಬಗ್ಗೆ ಕನಸು ಕಾಣ್ತಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv