ಕೈ ಗಲೀಜು ಆಗಬಾರದು ಅಂತಾ ಗ್ಲೌಸ್ ಹಾಕಿಕೊಂಡು ಬಡವರಿಗೆ ಟಿಎಂಸಿ ಅಭ್ಯರ್ಥಿ ಶೇಕ್​ಹ್ಯಾಂಡ್..!

ಖ್ಯಾತ ನಟಿ, ಟಿಎಂಸಿ ಅಭ್ಯರ್ಥಿ ಮಿಮಿ ಚಕ್ರವರ್ತಿ

ಜಾದವ್​ಪುರ (ಪಶ್ಚಿಮ ಬಂಗಾಳ): ಸಿಎಂ ಮಮತಾ ಬ್ಯಾನರ್ಜಿ ಅವ್ರ ಟಿಎಂಸಿ ಪಕ್ಷದ ಅಭ್ಯರ್ಥಿ ಹಾಗೂ ನಟಿ ಮಿಮಿ ಚಕ್ರಬೊರ್ತಿ, ಲೋಕಸಭೆ ಚುನಾವಣೆಯ ಕ್ಯಾಂಪೇನ್​​ ವೇಳೆ ಕೈ ಗಲೀಜು ಆಗಬಾರದು ಅಂಥ ಕೈಗೆ ಗ್ಲೌಸ್​ ಹಾಕಿಕೊಂಡು, ಮುಖ ಕಿವುಚಿ ಹಸ್ತಲಾಘವ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಬಿಜೆಪಿಗರ ಟೀಕೆಗೆ ಗರಿಯಾಗಿದೆ. ಕ್ರೀಡಾಪಟು ಹಾಗೂ ಇತ್ತೀಚೆಗೆ ಬಿಜೆಪಿ ಸೇರಿರುವ ಮೇಜರ್ ಸುರೇಂದ್ರ ಪೂನಿಜಾ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಸರ ಮತ್ತು ಅಸಹ್ಯಕರ ಜದವ್​ಪುರ ಲೋಕಸಭೆ ಕ್ಷೇತ್ರದ ಟಿಎಂಸಿ ಅಭ್ಯರ್ಥಿ, ಪ್ರಚಾರದ ವೇಳೆ, ದಲಿತ ಹಾಗೂ ಬಡ ಮತದಾರಿಗೆ ಹ್ಯಾಂಡ್​ ಶೇಕ್​ ಮಾಡುವಾಗ ಕೈಗೆ ಗ್ಲೌಸ್ ಹಾಕೊಂಡಿದ್ದಾರೆ. ಮಿಸ್ ಕ್ವೀನ್​ ಎಲಿಜಿಬತ್​ ಅವರೇ ಕೈಗೆ ಗ್ಲೌಸ್​​​ ಹಾಕಿಕೊಳ್ಳಲು ಅವರೇನು ಅಸ್ಪೃಶ್ಯರಾ? ಅಂತಾ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸೋಶಿಯಲ್​ ಮೀಡಿಯಾದಲ್ಲಿ ಅವ್ರ ಈರೀತಿಯ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಿಮಿ ಚಕ್ರಬೊರ್ತಿ, ಮತದಾರರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv