ಶಾರ್ಟ್​ ಡ್ರೆಸ್ ಹಾಕಿದ್ರೆ ನೀವು ಗ್ಲಾಮರಸ್ ಆಗಿ ಕಾಣ್ಬೇಕಾ? ಹೀಗೆ ಮಾಡಿ..!

ಆಕೆಯ ಗ್ಲಾಮರ್ ಬಗ್ಗೆ ತಿಳಿದುಕೊಳ್ಳಬೇಕಾದ್ರೆ ಆಕೆ ತೊಡುವ ಡ್ರೆಸ್ ಮೇಲೆ ಡಿಪೆಂಡ್ ಆಗುತ್ತೆ ಯಾಕಂದ್ರೆ ಅವಳು ಯಾವ ರೀತಿ ಉಡುಗೆ ತೊಟ್ಟು ಅದನ್ನ ಹೇಗೆ ನಿಭಾಯಿಸ್ತಾಳೆ ಅನ್ನೋದು ಮುಖ್ಯವಾಗುತ್ತೆ.ಪಾರ್ಟಿಗೆ ಸಖತ್ತಾಗಿ ರೆಡಿ ಆಗ್ಬೇಕು ಆದ್ರೆ ಹೇಗೆ ಅನ್ನೋ ಗೊಂದಲ ನಿಮಗಿದ್ಯಾ ಹಾಗಾದ್ರೆ ನೀವಿದನ್ನ ಓದಿ ಸೂಪರ್ ಆಗಿ ಕಾಣಿ.

1.ಆತ್ಮವಿಶ್ವಾಸ ಹೆಚ್ಚಿಸುವಂತಿರಲಿ ನಿಮ್ಮ ಉಡುಗೆ
ಯಾವ ಉಡುಗೆ ತೊಟ್ಟರೂ ನಾವು ಹೇಗೆ ರೆಪ್ರೆಸೆಂಟ್ ಮಾಡ್ತೀವಿ ಅನ್ನೋದು ಬಹಳ ಇಂಪಾರ್ಟೆಂಟ್. ತುಂಡುಡುಗೆ ತೊಟ್ಟು ಕಾನ್ಫಿಡೆಂಟಾಗಿರ್ಬೇಕು.ಸುಂದರವಾಗಿ,ಆಕರ್ಷಕವಾಗಿ ಕಾಣಿಸಬೇಕಾದ್ರೆ ನಾವುಟ್ಟ ಉಡುಗೆಯಲ್ಲಿ ಆರಾಮಾಗಿರೋದು ಮೊದಲು ಕಲೀಬೇಕು.ಸೋ,ಆತ್ಮ ವಿಶ್ವಾಸದ ಪೋಸ್ ನೀಡೋ ಮೂಲಕ ಸ್ತ್ರೀತತ್ವ ತೋರಿಸಿ.

2.ಮೇಕಪ್ ಕಡಿಮೆ ಆದಷ್ಟು ಒಳ್ಳೇದು
ಶಾರ್ಟ್​ ಡ್ರೆಸ್ಸಸ್ ಹಾಕಿದಾಗ ಅತಿಯಾದ ಮೇಕಪ್ ಒಳ್ಳೆಯದಲ್ಲ.ಬೇರೆಯವರನ್ನು ಕಾಪಿ ಮಾಡಿ ಅದರಂತೆ ಹೆಚ್ಚು ಮೇಕಪ್ ಮಾಡ್ಬೇಡಿ.ಶಾರ್ಟ್​ ಡ್ರೆಸ್ಸಸ್​ಗಳಿಗೆ ಯಾವಾಗ್ಲೂ ಲೈಟ್ ಹಾಗೂ ಸಿಂಪಲ್ ಮೇಕಪ್ ಉತ್ತಮ. ಹಾಗೇ, ಕಣ್ಣು,ಮೂಗು,ತುಟಿ ಹೀಗೆ ನಿಮ್ಮ ವೈಶಿಷ್ಟ್ಯಗಳನ್ನ ಮಾತ್ರ ಹೈಲೈಟ್ ಮಾಡಿದ್ರೆ ಸಾಕು.ಈ ತರದ ಡ್ರೆಸ್​ಗಳಿಗೆ ಫ್ಲಾಟ್ ಚಪ್ಪಲಿಗಳು ಸೂಟಾಗಲ್ಲ ಬದಲಿಗೆ ಹೈ ಹೀಲ್ಸ್ ಹಾಕಿ ಸೆಕ್ಸಿಯಾಗಿ ಕಾಣಿ.
3.ತ್ವಚೆಯ ರಕ್ಷಣೆಯೂ ಮುಖ್ಯ
ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗೋದಲ್ಲದೇ ಶುಷ್ಕವಾಗಿ ಕಾಣುತ್ತದೆ.ಅಲ್ಲದೇ ಚರ್ಮ ಸುಲಿಯುತ್ತದೆ.ಅಲ್ಲದೇ,ಕೆಲವರ ತ್ವಚೆ ಸೂರ್ಯನ ಬೆಳಕಿಗೆ ಮತ್ತು ಯು.ವಿ ಕಿರಣಗಳಿಗೆ ಅಲರ್ಜಿಯಾಗುವ ಸಂಭವವೂ ಇದೆ.ಆದ್ದರಿಂದ ತ್ವಚೆಯನ್ನು ರಕ್ಷಿಸಿಕೊಳ್ಳುವುದನ್ನು ಮರೆಯುವಂತಿಲ್ಲ.
4.ದೇಹವು ಉಬ್ಬಿಕೊಂಡಿದ್ದರೆ ಆಕರ್ಷಕವಾಗಿರುವುದಿಲ್ಲ
ಕಡಿಮೆ ಹಿಲ್ಡ್​ನ ಶೂಗಳು,ಟಯಟ್ ಸಾಕ್ಸ್ ಮತ್ತು ಬಿಗಿಯಾದ ಪ್ಯಾಂಟ್​ಗಳನ್ನ ಧರಿಸಬೇಡಿ.ಉಬ್ಬರಿಕೆಯ ದೇಹ ನಿಮ್ಮದಾಗಿದ್ರೆ ಆಯಿಲ್ ಮಸಾಜ್ ಮಾಡಿಕೊಂಡರೆ ಸಹಾಯವಾಗಬಹುದು.ಖಾಲಿ ಹೊಟ್ಟೇಲಿ ಕಾಫಿ ಕುಡಿಯೋದ್ರಿಂದಲೂ ಪ್ರಯೋಜನವನ್ನ ಪಡೀಬಹುದು.
5.ದೇಹದ ಕೋನಗಳ ಬಗ್ಗೆ ಎಚ್ಚರವಹಿಸಿ
ಹೀಗೆ ತುಂಡುಡುಗೆ ತೊಟ್ಟು ಹೊರಹೋಗ್ಬೇಕಾದ್ರೆ ಮೊಣಕೈ,ಮಂಡಿ,ಹಿಂಬಾಗಗಳ ಬಗ್ಗೆ ನಿಗಾ ಇಡಬೇಕು.ಬಿಸಿನೀರಿನ ಸ್ನಾನ ಮಾಡಿ ಅದಕ್ಕೆ ತಕ್ಕನಾದ ಕ್ರೀಮ್ ಹಾಕೋದನ್ನ ಮರೀಬೇಡಿ ಗಟ್ಟಿಯಾದ ಚರ್ಮ ಅಥವಾ ಹಾನಿಯಾದ ಚರ್ಮಕ್ಕೆ ಳಿಸುತ್ತವೆ.ಅಲ್ಲದೇ,ಮೊಡವೆ,ಮಾರ್ಕ್ಸ್​ಗಳನ್ನ ಫೌಂಡೇಷನ್ ಪೌಡರ್ ಹಚ್ಚುವ ಮೂಲಕ ಮರೆಮಾಚಿ. ಎಕ್ಸ್​ಪೋಸ್ ಮಾಡುವ ಭಾಗಗಳಾದ ಕುತ್ತಿಗೆ,ತೋಳು,ಕಾಲರ್​ಬೋನ್ ಮತ್ತು ಕ್ಲೀವೇಜ್ ಮಿನುಗುವ ಶೈನಿಂಗ್ ಪೌಡರ್​ನಿಂದ ಎದ್ದುಕಾಣಿಸಿ.
6.ಬಿಗಿಯಾದ ಬಟ್ಟೆ
ಬಿಗಿಯಾದ ಬಟ್ಟೆಗಳನ್ನ ಧರಿಸೋದ್ರಿಂದ ಸೆಕ್ಸಿ ಲುಕ್ ಕೊಡುತ್ತೆ ಅನ್ನೊ ಭಾವನೆಯನ್ನ ಮೊದಲು ಬಿಟ್ಟಾಕಿ.ನಮ್ಮ ನಾರ್ಮಲ್ ಸೈಜ್​ಗಿಂತ ಎರಡು,ಮೂರು ಪಟ್ಟು ಚಿಕ್ಕ ಅಳತೆಯ ಬಟ್ಟೆಗಳನ್ನ ಹಾಕಿಕೊಳ್ಳೋ ಪ್ರಯತ್ನ ಮಾಡಿದ್ರೆ ದಪ್ಪಕಾಣುವುದಲ್ಲದೇ ನಿರಾಸೆಯು ಆಗುತ್ತೆ.ಯಾವಾಗಲೂ ನಾವುಡುವ ಉಡುಗೆ ಛಾಯಾರುಪವನ್ನ ಕೆತ್ತಿದಂತೆ ತೊರುವ ರೀತಿಯಾಗಿದ್ದರೆ ನಮಗೂ ಆನಂದದಾಯಕವಾಗುತ್ತೆ. ಸ್ಟ್ರೆಚ್ ಆಗೋ ಡ್ರೆಸ್ಸಸ್ ಓಕೆ ಬಟ್ ತುರುಕಿದಹಾಗೆ ರೀತಿಯಲ್ಲಿ ತೋರಿಸುತ್ತಿದ್ದರೆ,ಯಾವುದೇ ವಯಸ್ಸಿನವರಾದರೂ ಸಹ ಇದು ಆಕರ್ಷಕವಾಗಿರುವುದಿಲ್ಲ.

7.ಹೆಚ್ಚು ತೋರಿಕೆ ಸಮಂಜಸವಲ್ಲ
ತ್ವಚೆಯನ್ನು ತೋರಿಸುವುದು ಮೋಹಕ ಹಾಗೂ ಯೌವ್ವನವನ್ನ ಎತ್ತಿಹಿಡಿಯಬಹುದು ಆದರೆ ಎಲ್ಲವೂ ತೊರಿಕೆಯೇ ಆದರೆ ನೋಡುಗರಿಗೆ ಅಸಭ್ಯತೆ ಅನ್ನಿಸಬಹುದು. ನಮ್ಮ ದೇಹದ ಜಾಳು ಜಾಳಾಗಿ ಕಾಣಬಾರದು.ಬೇರೆಯವರಿಗೆ ಮನರಂಜನೆ ರೀತಿಯಲ್ಲಿ ತೋರಿಸಿಕೊಳ್ಳುವ ಬದಲು ಅಡಗಿರುವ ಅಮೃತಶಿಲೆಯಂತೆ ಕಾಣುವುದು ಲೇಸು.
8.ನಮ್ಮ ಸಂವೇದನವನ್ನು ಹೆಚ್ಚಿಸುವ ಉಡುಗೆ ತೊಡಬೇಕು
ಯಾವುದೇ ಉಡುಗೆ ತೊಟ್ಟರೂ ಸಹ ಅದರಲ್ಲಿ ನಮ್ಮ ವ್ಯಕ್ತಿತ್ವ ತೋರಿಸುತ್ತದೆ. ಅನ್ನೋದನ್ನ ಮರೆಯಬಾರದು.ಯಾವುದೇ ಬಟ್ಟೆ ಹಾಕೊಂಡ್ರು ಕ್ರಿಯೇಟಿವ್,ತುಂಬಾ ವಿಭಿನ್ನ ರೀತಿ ಮತ್ತು ಹಳೆಯ ಮತ್ತು ಅವ್ಯವಸ್ಥೆಯಾಗಿ ಕಾಣುವ ಬಟ್ಟೆಗಳನ್ನು ಹಾಕಬೇಡಿ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv