ಹೊಟ್ಟೆಯ ಸುತ್ತ ಸಂಗ್ರಹವಾಗುವ ಹಠಮಾರಿ ಕೊಬ್ಬಿಗೆ ಇಲ್ಲಿದೆ ಸಿಂಪಲ್​ ಪರಿಹಾರ

ಸಣ್ಣದಾಗಿ ಬಳುಕುವ ಬಳ್ಳಿಯಂತ ಸೊಂಟ ಬೇಕು ಅನ್ನೋದು ಹೆಚ್ಚು ಮಕ್ಕಳ ಆಸೆ. ಆದ್ರೆ ಎಷ್ಟೇ ಡಯೆಟ್​ ಮಾಡಿದ್ರೂ, ವರ್ಕೌಟ್​ ಮಾಡಿದ್ರು ಸಣ್ಣ ಆಗೋದು ತುಂಬಾ ಕಷ್ಟ. ಸಾಮಾನ್ಯವಾಗಿ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿರುತ್ತೆ. ಇದು ಅನಾರೋಗ್ಯದ ಸಂಕೇತ. ವ್ಯಾಯಾಮದ ಕೊರತೆ, ಅನಾರೋಗ್ಯಕರ ಆಹಾರ, ಸಂಸ್ಕರಿಸಿದ ಕಾರ್ಬ್ಸ್ ಮತ್ತು ಸಕ್ಕರೆ ಅಥವಾ ಜೆನೆಟಿಕ್​ನ ಅತಿಯಾದ ಬಳಕೆ ದೇಹದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಇದರಿಂದ ಶುಗರ್​ ಕಾಯಿಲೆ, ಹೃದಯದ ತೊಂದರೆಗಳು ಕಾಣಿಸಿಕೊಳ್ಳಬಹುದು.

ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಕೊಬ್ಬನ್ನ ಕರಗಿಸಬೇಕು ಅಂದ್ರೆ ಈ ರೀತಿ ಮಾಡಿ

1. ಸಾಕಷ್ಟು ಪ್ರೋಟೀನ್​ ಆಹಾರಗಳನ್ನ ಸೇವಿಸಿ: ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರಗಳು ಹಾಗೂ ಪ್ರೋಟೀನ್​ಗಳು ಇರುವ ಆಹಾರವನ್ನ ಹೆಚ್ಚು ಸೇವಿಸಿ. ಇದು ಹೊಟ್ಟೆ ಕೊಬ್ಬನ್ನು ಕರಗಿಸಲು ಬಹಳ ಪ್ರಯೋಜನಕಾರಿ. ಯಾಕೆಂದ್ರೆ ಪ್ರೋಟೀನ್​ ಜೀರ್ಣಕ್ರಿಯೆಯನ್ನ ಹೆಚ್ಚಿಸಲು ಸಹಾಯ ಮಾಡುತ್ತವೆ ಮತ್ತು ಅತಿಯಾಗಿ ಊಟ ಮಾಡುವುದನ್ನ ತಡೆಯುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಚಿಕನ್​, ಮೊಟ್ಟೆ, ಮೀನು, ಕಾಟೇಜ್ ಚೀಸ್, ಮತ್ತು ನಟ್ಸ್​ಗಳಂತ ಆಹಾರವನ್ನ ಹೆಚ್ಚಾಗಿ ಸೇವಿಸಿ.

2. ನಿಮ್ಮ ಆಹಾರದಲ್ಲಿ ಫೈಬರ್ ಅಂಶ ಹೆಚ್ಚಾಗಿರಲಿ: ಫೈಬರ್ ಸಹ ಒಂದು ಪೌಷ್ಠಿಕಾಂಶವಾಗಿದ್ದು ಅದು ನಿಮ್ಮ ಸೊಂಟದ ಸುತ್ತ ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಬಹಳಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಿ.

3. ಜಂಕ್ ಫುಡ್​ನಿಂದ ದೂರವಿರಿ: ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್ ಮತ್ತು ಪಾಸ್ಟಾಗಳಂತಹ ಜಂಕ್ ಮತ್ತು ಕೊಬ್ಬಿನ ಆಹಾರಗಳು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದಲ್ಲದೆ, ಜಂಕ್​ಫುಡ್​ಗಳಲ್ಲಿ ಯಾವುದೇ ಪೌಷ್ಟಿಕಾಂಶವಿರುವುದಿಲ್ಲ. ಇದನ್ನ ಸೇವಿಸಿದ ಕೆಲವೇ ಹೊತ್ತಿನಲ್ಲಿ ಮತ್ತೆ ನಿಮಗೆ ಹಸಿವಾದಂತೆ ಭಾಸವಾಗಬಹುದು. ಈ ವೇಳೆ ನೀವು ಹೆಚ್ಚು ಆಹಾರ ಸೇವಿಸುವುದರಿಂದ ಹೊಟ್ಟೆಯ ಸುತ್ತ ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ.

4. ಸಾಕಷ್ಟು ನೀರು  ಕುಡಿಯಿರಿ: ಹೆಚ್ಚಾಗಿ ನೀರು ಕುಡಿಯುವುದು ಮತ್ತು ಇತರ ಆರೋಗ್ಯಕರ ಪಾನೀಯಗಳು ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ ಜೀರ್ಣಕ್ರಿಯೆಯೆನ್ನ ಹೆಚ್ಚಿಸಿ, ಮೆಟಾಬಾಲಿಸಂ ಹೆಚ್ಚಿಸುತ್ತದೆ. ನೀರು, ಎಳನೀರು, ನಿಂಬೆ ಹಣ್ಣಿ ಜ್ಯೂಸ್​, ತಾಜಾ ಹಣ್ಣಿನ ರಸಗಳು ಮತ್ತು ತರಕಾರಿ ರಸಗಳನ್ನ ಸೇವಿಸುವುದರಿಂದ ಕೊಬ್ಬಿನಾಂಶವನ್ನ ಕಡಿಮೆ ಮಾಡಿಕೊಳ್ಳಬಹುದು.

5. ಸಂಸ್ಕರಿಸಿದ ಸಕ್ಕರೆ ಪದಾರ್ಥವನ್ನ ಸೇವಿಸದಿರಿ: ಸಂಸ್ಕರಿಸಿದ ಬೇಕರಿ ತಿನಿಸುಗಳು, ಬೇಕರಿ ಸ್ಟಫ್, ಚಾಕೊಲೇಟ್​ಗಳು, ಕ್ಯಾಂಡೀಗಳು, ಸಿಹಿತಿನಿಸುಗಳು ಮತ್ತು ಇತರೆ ಸಿಹಿತಿಂಡಿಗಳಲ್ಲಿ ಕಂಡುಬರುವ ಸಂಸ್ಕರಿಸಿದ ಸಕ್ಕರೆ ನಿಮ್ಮ ಆರೋಗ್ಯಕ್ಕೆ ನಿಜವಾಗಿಯೂ ಹಾನಿಕಾರಕವಾಗಿದೆ. ಬದಲಾಗಿ ತೆಂಗಿನ ಕಾಯಿಯಿಂದ ತಯಾರಾದ ಸಕ್ಕರೆಗಳನ್ನ ಬಳಸಿ. ಇದರಿಂದ ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದು ಕಡಿಮೆಯಾಗುತ್ತದೆ.

6. ಸಾಕಷ್ಟು ನಿದ್ರೆ ಮಾಡಿ ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ: ನಿದ್ರಾಹೀನತೆಯು ಹೊಟ್ಟೆಯಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ. ನೀವು ನಿದ್ದೆ ಮಾಡಿದಾಗ, ನೀವು ಸೇವಿಸಿದ ಜಂಕ್​ಫುಡ್​ಗಳು ಸುಲಭವಾಗಿ ಜೀರ್ಣವಾಗುತ್ತದೆ. ಇದರ ಜೊತೆಗೆ ಒತ್ತಡವನ್ನ ಕಡಿಮೆ ಮಾಡಿಕೊಳ್ಳಿ. ಇದು ನಿಮಗೆ ಉತ್ತಮ ಆರೋಗ್ಯವನ್ನ ಒದಗಿಸುತ್ತದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv