ಪಾರ್ಕ್​​ಗಳಲ್ಲಿ ಹಿಮ್ಮುಖವಾಗಿ ನಡೆಯೋರನ್ನ ನೋಡಿದ್ದೀರಾ? ಹಾಗೇಕೆ ನಡೆಯುತ್ತಾರೆ ಗೊತ್ತಾ..?!

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳೋಕೆ ನಾವು ಏನೇನೋ ಸರ್ಕಸ್ ಮಾಡ್ತೀವಿ. ಸಾವಿರಾರು ರೂಪಾಯಿ ಖರ್ಚು ಮಾಡ್ತೀವಿ. ಆದ್ರೆ, ಒಂದಿಷ್ಟು ಶ್ರಮ ಪಡದೇ, ಒಂದು ರೂಪಾಯಿನೂ ಖರ್ಚು ಮಾಡದೇ ನಮ್ಮ ಮೆಮೊರಿ ಪವರ್​ನ ಹೆಚ್ಚಿಸಿಕೊಳ್ಬೋದು. ಹೌದು ರೋಹಾಂಪ್ಟನ್ ಯುನಿವರ್ಸಿಟಿಯ ತಜ್ಞರು  ನಡೆಸಿದ ಅಧ್ಯಯನದಲ್ಲಿ ಈ ಸತ್ಯ ಬಹಿರಂಗವಾಗಿದೆ.

ಇದಕ್ಕಾಗಿ 114 ಮಂದಿಯನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಪ್ರತೀ ಗುಂಪಿನವರಿಗೂ ವೀಡಿಯೋವೊಂದನ್ನ ತೋರಿಸಿದ್ದಾರೆ. ವೀಡಿಯೋ ವೀಕ್ಷಿಸಿದ ನಂತರ ಒಂದು ಗುಂಪಿನವರಿಗೆ ಸಹಜವಾಗಿ ಹಾಗೂ ಇನ್ನೊಂದು ಗುಂಪಿನವರು ಹಿಮ್ಮುಖವಾಗಿ 10 ನಿಮಿಷಗಳ ಕಾಲ ನಡೆಸಲಾಯ್ತು. ನಂತರ ವೀಡಿಯೋಗೆ ಸಂಬಂಧಸಿದಂತೆ ಎರಡೂ ಗುಂಪುಗಳಿಗೆ ಪ್ರಶ್ನಿಸಿದ್ದಾರೆ. ಸಹಜವಾಗಿ ನಡೆದವರಿಗಿಂತ ಹಿಮ್ಮುಖವಾಗಿ ನಡೆದವರ ಗುಂಪು,  ತಜ್ಞರು ಕೇಳಿದ ಹೆಚ್ಚಿನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿವೆಯಂತೆ.  ಸೋ  ಮರೆವಿನಾ ಖಾಯಿಲೆ ಇದ್ದವರಿಗೆ ಹಿಮ್ಮುಖವಾಗಿ ನಡೆಯುವುದು ಬೆಸ್ಟ್​ ಸಲ್ಯೂಶನ್​. ರಾತ್ರಿ ಪೂರಾ ಎಕ್ಸಾಂಗಾಗಿ  ಓದಿ ಬೆಳಿಗ್ಗೆ ಎಲ್ಲಾ ಮರೆತು ಹೋಯ್ತು ಎನ್ನುವವರು, ಇನ್ಮೇಲಿಂದ ಎಕ್ಸಾಮ್ ಟೈಮ್​ನಲ್ಲಿ  ಈ ಟ್ರಿಕ್ ಒಮ್ಮೆ ಟ್ರೈ ಮಾಡಿ ನೋಡಿ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv