ಡ್ಯಾಂಡ್ರಫ್​​​​ ಸಮಸ್ಯೆನಾ..? ಪರಿಹಾರಕ್ಕೆ ಇಲ್ಲಿದೆ ಟಿಪ್ಸ್​​​..!

ಕೂದಲು ಸೊಂಪಾಗಿ ಬೆಳೆಯಬೇಕು. ಜೊತೆಗೆ ನಾವು ಚೆನ್ನಾಗಿ ಕಾಣಬೇಕು ಅಂತ ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಈಗಂತೂ ಡಿಫ್​ರೆಂಟ್​​ ಹೇರ್​​ಸ್ಟೈಲ್​ ಒಂಥರಾ ಟ್ರೆಂಡ್​ ಆಗ್ಬಿಟ್ಟಿದೆ. ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಹೇರ್​​ ಬಗ್ಗೆ ತುಂಬಾನೇ ಕೇರ್​ ಮಾಡ್ತಾರೆ. ಆದ್ರೆ ಅನೇಕ ಕಾರಣಗಳಿಂದ ಹೇರ್​ ಫಾಲ್​ ಆಗುತ್ತದೆ. ಅದ್ರಲ್ಲೂ ತಲೆಹೊಟ್ಟು(ಡ್ಯಾಂಡ್ರಫ್​​) ಸಮಸ್ಯೆಯಂತೂ ಅನೇಕರಿಗೆ ಬಿಟ್ಟು ಬಿಡದೆ ಕಾಡುತ್ತೆ. ಡ್ಯಾಂಡ್ರಫ್​​ ಸಮಸ್ಯೆಯಿಂದಾಗಿ ಹೆಚ್ಚಾಗಿ ಕೂದಲು ಉದುರಲು ಶುರುವಾಗುತ್ತೆ. ತಲೆಹೊಟ್ಟಿನಿಂದಾಗಿ ಹಲವು ಬಾರಿ ಮುಜುಗರಕ್ಕೂ ಒಳಗಾಗಬೇಕಾಗುತ್ತದೆ. ಇನ್ನೂ ತಲೆಹೊಟ್ಟಿನ ಸಮಸ್ಯೆಗಾಗಿ ಅನೇಕರು ಕೆಮಿಕಲ್​​​ ಅಂಶವನ್ನು ಹೊಂದಿರುವ ಶ್ಯಾಂಪು ಅಥವಾ ಮಾರ್ಕೆಟ್​​​ಗಳಲ್ಲಿ ಸಿಗುವಂತಹ ಬೇರೆ ಬೇರೆ ಪದಾರ್ಥಗಳ ಮೊರೆ ಹೋಗುತ್ತಾರೆ. ಇದರಿಂದಾಗಿ ಡ್ಯಾಂಡ್ರಫ್​ ಸಮಸ್ಯೆ ಹೆಚ್ಚಾಗಿ ಮತ್ತೂ ಹೆಚ್ಚು ಕೂದಲು ಉದುರುತ್ತದೆ. ನಿಮಗೂ ತಲೆಹೊಟ್ಟಿನ ಸಮಸ್ಯೆ ಇದ್ರೆ, ಅದರಿಂದ ಹೊರಬರೋದು ಅಂತ ಚಿಂತಿಸುತ್ತಿದ್ದೀರಾ ಹಾಗಾದ್ರೆ ಇಲ್ಲಿದೆ ಸೂಕ್ತ ಪರಿಹಾರ.

1. ಕೊಬ್ಬರಿ ಎಣ್ಣೆಗೆ ಸ್ವಲ್ಪ ನಿಂಬೆಹಣ್ಣಿನ ರಸ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಿ ಒಂದು ಗಂಟೆ ಬಿಟ್ಟು ಕೂದಲನ್ನು ತೊಳೆಯಿರಿ. ಅದಷ್ಟು ಶ್ಯಾಂಪು ಬಳಕೆ ಕಡಿಮೆ ಮಾಡಿ. ಸೀಗೆಕಾಯಿ ಪುಡಿ ಬಳಸಿ. ಇದು ನಿಮ್ಮ ಸ್ಕಾಲ್ಪ್​​ ಅನ್ನು ಉಪಚರಿಸಿ, ಹೊಟ್ಟನ್ನು ತಡೆಯುತ್ತದೆ.

2. ನಮ್ಮ ಹಿರಿಯರು ಉಪಯೋಗಿಸುತ್ತಿದ್ದ ಹರಳೆಣ್ಣೆಯನ್ನು ಇತ್ತೀಚೆಗೆ ನಾವು ಕಡೆಗಣಿಸುತ್ತಿದ್ದೇವೆ. ಹರಳೆಣ್ಣೆಯಲ್ಲಿ ವಿಟಮಿನ್​​-ಇ ಅಂಶ ಅಧಿಕವಾಗಿದೆ. ಹರಳೆಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಕೂದಲಿನ ಬುಡಕ್ಕೆ ಹಚ್ಚಿ ನಂತರ ಕೂದಲನ್ನು ತೊಳೆಯಬೇಕು. ಇದರಿಂದ ಕೂದಲಿನ ಹೊಟ್ಟು ನಿವಾರಣೆಯಾಗುತ್ತದೆ.

3. ಮೆಂತ್ಯ ಹಾಗೂ ಜೀರಿಗೆ ಮಿಶ್ರಣವನ್ನು ಒಂದೊಂದು ಚಮಚದಂತೆ ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಅದರ ಪೇಸ್ಟ್‌ ಮಾಡಿ ಕೂದಲಿನ ಬುಡಕ್ಕೆ ಹಾಗೂ ಕೂದಲಿಗೆ ಹಚ್ಚಿ. ಇದು ಡ್ಯಾಂಡ್ರಫ್​​​ ಸಮಸ್ಯೆಯನ್ನು ತಡೆಗಟ್ಟುತ್ತದೆ.

4. ಸ್ವಲ್ಪ ಹುಳಿ ಬಂದಿರುವ ಮೊಸರನ್ನು ಕೂದಲಿನ ಬುಡಕ್ಕೆ ಹಾಗೂ ಕೂದಲಿಗೆ ಹಚ್ಚಿ ಒಂದು ಗಂಟೆ ನೆನೆಯಲು ಬಿಡಿ. ನಂತರ ತಣ್ಣೀರಿನಿಂದ ತೊಳಿಯಿರಿ. ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ತಲೆ ಹೊಟ್ಟು ಸಮಸ್ಯೆ ಪರಿಹಾರವಾಗುತ್ತದೆ.

5. ಶ್ಯಾಂಪುಗಳ ಅತಿಯಾದ ಬಳಕೆಯಿಂದಾಗಿ ಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ. ಜೊತೆಗೆ ಕೂದಲು ಉದುರಲು ಆರಂಭವಾಗುತ್ತದೆ. ಹಾಗಾಗಿ ಶ್ಯಾಂಪು ಬಳಸುವವರು ಮಾರ್ಕೆಟ್​ನಲ್ಲಿ ಸಿಗುವ ಯಾವುದೋ ಶ್ಯಾಂಪುಗಳನ್ನು ಬಳಸಬೇಡಿ. ಬದಲಾಗಿ ಡಾಕ್ಟರ್​​​​ ಸಲಹೆ ಪಡೆದು ಶ್ಯಾಂಪುಗಳನ್ನು ಬಳಸಿ.

6. ಪ್ರತಿನಿತ್ಯ ವ್ಯಾಯಾಮ ಮಾಡಿ, ಪ್ರೋಟೀನ್​​​ಯುಕ್ತ ಆಹಾರ ಸೇವಿಸಿ. ಜೊತೆಗೆ ಹೆಲ್ತಿ ಡಯಟ್​ ಫಾಲೋ ಮಾಡೋದ್ರಿಂದ ತಲೆ ಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

7. ವಿಟಮಿನ್ಸ್​ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ. ಹಸಿ ತರಕಾರಿ, ಹಣ್ಣುಗಳನ್ನ​​​ ಹೆಚ್ಚಾಗಿ ಬಳಸಿ. ಕ್ಯಾಬೇಜ್​, ಮೊಟ್ಟೆ, ಈರುಳ್ಳಿಯನ್ನು ಪ್ರತಿನಿತ್ಯ ಆಹಾರದಲ್ಲಿ ಸೇವಿಸಿದರೆ ಉತ್ತಮ.

8. ಪ್ರತಿನಿತ್ಯ ಯೋಗ, ಧ್ಯಾನ ಮಾಡೋ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಒತ್ತಡ ಕಡಿಮೆಯಾಗಿ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಜೊತೆಗೆ ದೈಹಿಕ ಆರೋಗ್ಯ ಉತ್ತಮವಾಗಿದ್ದರೆ ಯಾವುದೇ ರೀತಿ ಸಮಸ್ಯೆ ಬರೋದಿಲ್ಲ.

ವಿಶೇಷ ಬರಹ: ಶ್ವೇತಾ ಸಾಲಿಯಾನ್​​​

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv