ಕೀಲುನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಈ ಹೆಲ್ದಿ ಟಿಪ್ಸ್​ ಫಾಲೋ ಮಾಡಿ

ಇತ್ತೀಚಿನ ದಿನಗಳಲ್ಲಿ  ಕೀಲು ನೋವು ​ ಒಂದು ಸಾಮಾನ್ಯವಾದ ಸಮಸ್ಯೆಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಕೀಲು ನೋವಿನ ಸಮಸ್ಯೆ ಕಾಡುತ್ತದೆ. ಕೀಲು ನೋವಿಗೆ  ಹಲವಾರು ಕಾರಣಗಳಿವೆ. ಪೌಷ್ಠಿಕಾಂಶಗಳ ಕೊರತೆ, ಕ್ಯಾಲ್ಶಿಯಂ ಕೊರತೆಯಿಂದ ತೂಕ ಹೆಚ್ಚಳವಾಗುವುದು, ವ್ಯಾಯಾಮಗಳನ್ನ ಮಾಡದೇ ಇರುವುದು,  ಹೀಗೆ ಹಲವಾರು ಕಾರಣಗಳಿಂದ ಕೀಲು ನೋವಿನ ಸಮಸ್ಯೆ ಕಾಡುತ್ತದೆ.

1. ಸಿಹಿ ಅಂದರೆ ಸಾಕು ಕೆಲವರಿಗೆ ಸಕ್ಕತ್​ ಫೇವರೇಟ್​. ಸಕ್ಕರೆ ಅಂಶ ಕೂಡಾ ನಮ್ಮ ದೇಹಕ್ಕೆ ಅವಶ್ಯವಾಗಿರುವ ಅಂಶಗಳಲ್ಲಿ ಮುಖ್ಯವಾಗಿದೆ. ಆದಾಗ್ಯೂ, ಸಂಸ್ಕರಿಸಿದ ಆಹಾರಗಳನ್ನ ಇತ್ತೀಚಿನ ದಿನಗಳಲ್ಲಿ ನಾವು ತಿನ್ನುತ್ತೇವೆ. ಅತಿಯಾದ ಶುಗರ್ ಸೇವನೆ ಇನ್​ಫ್ಲಾಮೇಶನ್​ ಅಪಾಯವನ್ನ ಉಂಟುಮಾಡುತ್ತದೆ.

2.ಆಲ್ಕೋಹಾಲ್: ಆಲ್ಕೋಹಾಲ್​ ಸೇವನೆ  ಕೀಲು ನೋವಿನ ಸಮಸ್ಯೆಯನ್ನ ಹೆಚ್ಚಿಸುತ್ತದೆ. ಹೆಚ್ಚು ಅಲ್ಕೋಹಾಲ್​ ಸೇವಿಸಿದ್ರೆ, ಮೂಳೆಗಳ ಬೆಳಬಣಿಗೆಗೆ ತೊಂದರೆ ಉಂಟಾಗುತ್ತದೆ. ಗೌಟ್ ಸಂಧಿವಾತದ ಒಂದು ಸ್ವರೂಪವಾಗಿದ್ದು ಇದು ಕೀಲುಗಳಲ್ಲಿ  ಸಹಿಸಲಾರದ ನೋವನ್ನ ಉಂಟುಮಾಡುತ್ತದೆ. ಆಲ್ಕೋಹಾಲ್ ನಿಮ್ಮ ದೇಹವನ್ನ ಡಿಹೈಡ್ರೇಟ್​​​ ಮಾಡುವುದರ ಜೊತೆಗೆ ಇನ್​ಫ್ಲಾಮೇಶನ್​ ಸಮಸ್ಯೆಯನ್ನ ಹೆಚ್ಚಿಸುತ್ತದೆ. ಒಂದು ವೇಳೆ ನೀವು ಸಂಧಿವಾತ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಆಲ್ಕೋಹಾಲ್ ಸೇವಿಸಬೇಡಿ. ನೀವು ಗಾಯದಿಂದ ಚೇತರಿಸಿಕೊಳ್ಳುತ್ತಿದ್ರೆ ಆಲ್ಕೋಹಾಲ್​ ಸೇವನೆ  ನಿಮ್ಮ  ಸಮಸ್ಯೆಯನ್ನ ಇನ್ನೂ ಹೆಚ್ಚಿಸಬಹುದು.

3. ಉಪ್ಪು ಸೇವನೆಯನ್ನ ಕಡಿಮೆ ಮಾಡಿ : ಅಧಿಕವಾಗಿ ಉಪ್ಪು ಸೇವಿಸೋದ್ರಿಂದ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುತ್ತದೆ. ನಿಮ್ಮ ದೇಹದಲ್ಲಿ ಫ್ಲೂಯಿಡ್​ ಅಂಶವನ್ನ ಹೆಚ್ಚಿಸುತ್ತದೆ. ಹೊಟ್ಟೆ ಉಬ್ಬುವುದು ಮತ್ತು ಇನ್​ಫ್ಲಾಮೇಶನ್​ ಸಮಸ್ಯೆ ಹೆಚ್ಚಿಸುತ್ತದೆ. ಅಲ್ಲದೇ ಕೀಲುಗಳಲ್ಲಿ ಕೂಡ ಊತವನ್ನು ಉಂಟು ಮಾಡಿ ನೋವನ್ನ ಉಂಟುಮಾಡುತ್ತದೆ.

4. ಸ್ಯಾಚುರೇಟೆಡ್ ಫ್ಯಾಟ್: ಹೆಚ್ಚು ಸ್ಯಾಚುರೇಟೆಡ್​ ಫ್ಯಾಟ್​ ಇರುವ ಆಹಾರವನ್ನ ಸೇವಿಸದರೆ ಹೃದಯದ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಇದು ನಿಮ್ಮ ಕೀಲುಗಳ ಹಾನಿಗೆ ಕಾರಣವಾಗಬಹುದು. ಒಂದು ವೇಳೆ ನೀವು ಆರ್ಥರೈಟೀಸ್​ ಸಮಸ್ಯೆಯಿಂದ ಬಳಲುತ್ತಿದ್ದು, ಸ್ಯಾಚುರೇಟೆಡ್​ ಫ್ಯಾಟ್​ ಹೆಚ್ಚು ಬಳಸಿದ್ರೆ ಹೃದಯಕ್ಕೆ ಉಂಟಾಗುವ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv