ಆರೋಗ್ಯಕರ ತ್ವಚೆಗೆ ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ

ಕಾಂತಿಯುತವಾದ ತ್ವಚೆ, ಅದ್ರಲ್ಲೂ ಮೊಡವೆ ಕಲೆಗಳಿಲ್ಲದ ತ್ವಚೆ ಯಾರಿಗೆ ಬೇಡ ಹೇಳಿ. ನಾವು ಎಷ್ಟೇ ಚೆನ್ನಾಗಿ ಡ್ರೆಸ್​ ಮಾಡ್ಕೊಂಡ್ರು ನಮ್ಮ ಮುಖ  ಚೆನ್ನಾಗಿಲ್ಲ ಅಂದ್ರೆ ಎಲ್ಲಾನು ವೇಸ್ಟ್​ ಅನ್ಸುತ್ತೆ. ವಯಸ್ಸಾದಂತೆ ನಮ್ಮ ಚರ್ಮದ ಆರೋಗ್ಯ ಕ್ಷೀಣಿಸುತ್ತೆ ಮತ್ತು ಅದನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ.  ಪ್ರತಿಯೊಬ್ಬರೂ ಆರೋಗ್ಯಕರ ತ್ವಚೆ ಪಡೆಯಲು ಇಚ್ಛಿಸುತ್ತಾರೆ. ಇದಕ್ಕಾಗಿ ದುಬಾರಿ ಕ್ರೀಮ್​​ಗಳಮೊರೆಹೋಗ್ತಾರೆ. ಆದ್ರೆ ತ್ವಚೆ ಹಾಳಾಗದಂತೆ ಅದನ್ನ ಕಾಪಾಡಿಕೊಳ್ಳಬಹುದು. ಅದು ಕೂಡಾ ಯಾವುದೇ ಖರ್ಚಿಲ್ಲದೆ. ಇದಕ್ಕಾಗಿ ಕೆಲವೊಂದು ಸಿಂಪಲ್​ ಟಿಪ್ಸ್​ಗಳನ್ನ ನೀವು ಫಾಲೋ ಮಾಡಬೇಕಾಗುತ್ತದೆ. ಮೊದಲು ನಿಮ್ಮದು ಡ್ರೈ ಸ್ಕಿನ್​ ಅಥವಾ ಆಯ್ಲಿ ಸ್ಕಿನ್​ ಎಂಬುದನ್ನ ಖಚಿತಪಡಿಸಿಕೊಳ್ಳಿ.

1. ನಿಮ್ಮ ತ್ವಚೆಯ ಸಮಸ್ಯೆಗೆ ರಾಮಬಾಣ ಅಂದರೆ ನೀರು. ಅಗತ್ಯ ಪ್ರಮಾಣದಲ್ಲಿ ನೀರು ಸೇವಿಸುವುದರಿಂದ ಡ್ರೈ ಸ್ಕಿನ್​ ಸಮಸ್ಯೆ ದೂರವಾಗುತ್ತದೆ. ಅಲ್ಲದೇ ಮೊಡವೆ ಬಾರದಂತೆ ತಡೆಗಟ್ಟುವ ಮೂಲಕ ನಿಮ್ಮ ಚರ್ಮಕ್ಕೆ ನೈಸರ್ಗಿಕವಾದ ಪರಿಹಾರ ನೀಡುತ್ತದೆ. ಒಂದು ದಿನಕ್ಕೆ ಕನಿಷ್ಠ 3 ರಿಂದ 5 ಲೀಟರ್​ ನೀರು ಸೇವಿಸುವುದನ್ನ ಅಭ್ಯಾಸ ಮಾಡಿಕೊಳ್ಳಿ.

2. ನೀವು ಸೇವಿಸುವ ಪೌಷ್ಠಿಕ ಆಹಾರ ಕೂಡಾ ನಿಮ್ಮ ತ್ಚಚೆಯ ಮೇಲೆ ಪರಿಣಾಮ ಬೀರುತ್ತದೆ. ಪೌಷ್ಠಿಕ ಆಹಾರವನ್ನ ಸೇವನೆಯಿಂದ ದೇಹದ  ಆರೋಗ್ಯದ ಜೊತೆಗೆ ನಿಮ್ಮ ತ್ವಚೆ ಕೂಡಾ ಆರೋಗ್ಯವಾಗಿರುತ್ತದೆ. ಅದಕ್ಕಾಗಿ ಹೆಚ್ಚು ಪೌಷ್ಠಿಕಾಂಶವಿರುವ ಹಣ್ಣುಗಳು, ಹಸಿರು ತರಕಾರಿಗಳು, ಸೊಪ್ಪು, ಫೈಬರ್​ಯುಕ್ತ ಆಹಾರವನ್ನ ಹೆಚ್ಚಾಗಿ ಸೇವಿಸಿ. ಮುಖ್ಯವಾಗಿ ಎಣ್ಣೆ ಪದಾರ್ಥಗಳನ್ನ ಸೇವಿಸುವುದನ್ನ ಕಡಿಮೆ ಮಾಡಿ. ನಿಮ್ಮ ಆಹಾದ ಆಯ್ಕೆಯಿಂದಲೇ ಆಯ್ಲಿ ಸ್ಕಿನ್​ ಮತ್ತು ​ ಮೊಡವೆ ಸಮಸ್ಯೆಗಳನ್ನ ತಡೆಯಬಹುದು.

3. ಬಿಸಿಲಿನಲ್ಲಿ  ಹೆಚ್ಚು ಓಡಾಡುವುದರಿಂದ ನಿಮ್ಮ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸನ್​ಬರ್ನ್​, ಟ್ಯಾನ್ ಉಂಟಾಗಿ ನಿಮ್ಮ ತ್ಚಚೆ ಕಾಂತಿ ಕಳೆದುಕೊಳ್ಳುತ್ತದೆ. ಹೀಗಾಗಿ ನೀವು ಹೊರಗೆ ಹೋಗುವಾಗ ಸನ್​ಸ್ಕ್ರೀನ್​ ತಪ್ಪದೇ ಬಳಸಿ. ಮತ್ತು ಬಿಸಿಲಿಗೆ ತಕ್ಕಂತೆ ಬಟ್ಟೆಗಳನ್ನ ಧರಿಸಿ. ​

4. ದಿನನಿತ್ಯ ವರ್ಕೌಟ್​ ಮಾಡುವುದರಿಂದ ನಿಮ್ಮ ದೇಹ ಫಿಟ್​ ಆ್ಯಂಡ್​ ಫೈನ್​ ಆಗಿರುತ್ತೆ . ರೆಗ್ಯೂಲರ್​ ಆಗಿ ಎಕ್ಸರ್ಸೈಜ್​ ಮಾಡುವುದರಿಂದ ನಿಮ್ಮ ಚರ್ಮಕ್ಕೆ ಅಗತ್ಯವಾದ ಆಮ್ಲಜನಕ ದೊರಕುತ್ತದೆ. ಇದರಿಂದ ನಿಮ್ಮ ತ್ವಚೆ ಆರೋಗ್ಯವಾಗಿಯೂ, ಕಾಂತಿಯುತವಾಗಿಯೂ ಹೊಳೆಯುತ್ತದೆ.

5. ನಿಮ್ಮ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಕೊಡಿ. ದಿನಕ್ಕೆ 6 ರಿಂದ 8 ಗಂಟೆ ನಿದ್ರೆ ಮಾಡುವುದರಿಂದ ನಿಮ್ಮ ತ್ವಚೆ ರೆಜ್ಯೂವಿನೇಟ್​ ಆಗುತ್ತದೆ. ಅಲ್ಲದೇ ಡಾರ್ಕ್​ ಸರ್ಕಲ್ಸ್​ ಸಮಸ್ಯೆ ಬರುವುದನ್ನ ತಡೆಗಟ್ಟುತ್ತದೆ.

6. ದುಬಾರಿ ಬ್ಯೂಟಿ ಪ್ರಾಡಕ್ಟ್ಸ್​ ಕೆಲವೊಮ್ಮೆ ನಿಮ್ಮ ತ್ವಚೆಯನ್ನ ಹಾಳು ಮಾಡಬಹುದು. ಯಾಕಂದ್ರೆ ಕೆಲವೊಬ್ಬರ ಸ್ಕಿನ್​ ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಬ್ಯೂಟಿ ಪ್ರಾಡಕ್ಟ್​ಗಳು ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅದಕ್ಕಾಗಿ ಹೊಸ ಕ್ರೀಮ್​ಗಳನ್ನ ನೇರವಾಗಿ ಮುಖಕ್ಕೆ ಹಚ್ಚುವ ಮೊದಲು ಪರೀಕ್ಷಿಸಿಕೊಳ್ಳಿ.

7. ಮಾಯಿಶ್ಚರೈಸರ್ಸ್​ ಬಳಸುವುದರಿಂದ ಡ್ರೈ ಸ್ಕಿನ್​ ಸಮಸ್ಯೆ ದೂರವಾಗುತ್ತದೆ. ನಿಮ್ಮ ಸ್ಕಿನ್​ ಡಿಹೈಡ್ರೇಟ್​ ಆಗದಂತೆ ಕಾಪಾಡುತ್ತದೆ.