ಬೇಗ ನಿರ್ಧರಿಸದಿದ್ರೆ ಟಿಕ್​ಟಾಕ್ ಮೇಲಿನ​ ಬ್ಯಾನ್​​ ತೆರವು: ಸುಪ್ರೀಂ ಕೋರ್ಟ್​

ಟಿಕ್​​​ಟಾಕ್​ ಆ್ಯಪ್​​ ಮೇಲಿನ ನಿಷೇಧದ ಬಗ್ಗೆ ಬೇಗನೆ ನಿರ್ಧಾರ ಮಾಡುವಂತೆ ಮದ್ರಾಸ್​​ ಹೈಕೋರ್ಟ್​ಗೆ ಸುಪ್ರೀಂ ಕೋರ್ಟ್​ ಸೂಚಿಸಿದೆ. ಬ್ಯಾನ್ ಪ್ರಶ್ನಿಸಿ ಸಲ್ಲಿಕೆಯಾಗಿರೋ ಅರ್ಜಿಯ ಬಗ್ಗೆ ಏಪ್ರಿಲ್ 24ರ ಒಳಗಾಗಿ ನಿರ್ಧಾರ ತಿಳಿಸದಿದ್ರೆ ಟಿಕ್​ಟಾಕ್ ಆ್ಯಪ್ ಮೇಲಿನ ನಿಷೇಧ ತೆರವಾಗುತ್ತದೆ ಎಂದು ಉನ್ನತ ನ್ಯಾಯಾಲಯ ಎಚ್ಚರಿಸಿದೆ.

ಟಿಕ್​​ಟಾಕ್​ ಮೇಲೆ ನಿಷೇಧ ಹೇರಿ ಮದ್ರಾಸ್​ ಹೈಕೋರ್ಟ್​ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಟಿಕ್​​ಟಾಕ್​ ಆ್ಯಪ್ ಮಾಲೀಕತ್ವ ಹೊಂದಿರೋ ಚೈನೀಸ್​ ಕಂಪನಿ ಬೈಟೆಂಡೆನ್ಸ್ ಸುಪ್ರೀಂ ಕೋರ್ಟ್​ಗೆ​ ಅರ್ಜಿ ಸಲ್ಲಿಸಿತ್ತು. ನಮ್ಮನ್ನು ವಿಚಾರಣೆ ಮಾಡದೆಯೇ ಈ ಆದೇಶ ನೀಡಲಾಗಿದೆ. ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ಈ ಆ್ಯಪ್ ಬಳಸಿ ತಮ್ಮನ್ನು ತಾವು ಎಕ್ಸ್​ಪ್ರೆಸ್​ ಮಾಡಿಕೊಳ್ಳಿತ್ತಿದ್ದಾರೆ. ಆ್ಯಪ್ ಮೇಲೆ ನಿಷೇಧ ಹೇರೋದ್ರಿಂದ ಭಾರತೀಯರ ವಾಕ್​​ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿದಂತಾಗುತ್ತದೆ. ಹೀಗಾಗಿ ಈ ಆದೇಶವನ್ನ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕಂಪನಿ ಹೇಳಿತ್ತು.

ಅಶ್ಲೀಲ ವಿಡಿಯೋಗಳ ಹಿನ್ನೆಲೆ ಟಿಕ್​ಟಾಕ್​ ಆ್ಯಪ್​ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ಮದ್ರಾಸ್​ ಹೈಕೋರ್ಟ್​ ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆ ನೀಡಲು ಈ ಹಿಂದೆ ಸುಪ್ರೀಂ ಕೋರ್ಟ್​ ನಿರಾಕರಿಸಿತ್ತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv