ಮೋದಿ ಸಂಕಲ್ಪ ಸಮಾವೇಶಕ್ಕೆ ಪೊಲೀಸರಿಂದ ಬಿಗಿ ಭದ್ರತೆ

ಬೆಂಗಳೂರು: ಇಂದು ನಗರಕ್ಕೆ ಪ್ರಧಾನ‌ಮಂತ್ರಿ ನರೇಂದ್ರ ಮೋದಿ‌ ಆಗಮಿಸಲಿದ್ದಾರೆ. ಅರಮನೆ ಮೈದಾನದ ಕೃಷ್ಣ ವಿಹಾರ್ ಆವರಣದಲ್ಲಿ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿಕೆ ಸಿಂಗ್ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಮೂವರು ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು, 11 ಡಿಸಿಪಿ, 33 ಎಸಿಪಿ ಸೇರಿದಂತೆ ಒಟ್ಟು 3000 ಸಿಬ್ಬಂದಿ ಭದ್ರತೆಯ ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಕೆಎಸ್‌ಆರ್‌ಪಿಯ 50 ಹಾಗೂ ಸಿಎಆರ್‌ನ 30 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೇ, ಅರಮನೆ ಮೈದಾನ ಸುತ್ತಮುತ್ತ ವಾಹನ ದಟ್ಟಣೆಯ ನಿರ್ವಹಿಸಲು ಸಂಚಾರ ವಿಭಾಗದ 1,200 ಪೊಲೀಸರನ್ನು ನೇಮಿಸಲಾಗಿದೆ. ಸಮಾವೇಶಕ್ಕೆ ಬರುವ ರಾಜಕೀಯ ನಾಯಕರು ಹಾಗೂ ಆಹ್ವಾನಿತರಿಗೆ ತ್ರಿಪುರವಾಸಿನಿ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv