ಹುಲಿಯ ಹೆಜ್ಜೆ ಹುಟ್ಟಿಸಿದೆ ಪ್ರಾಣ ಭಯ

ಕೊಡಗು: ಜಿಲ್ಲೆಯಲ್ಲಿ ಹುಲಿ ತನ್ನ ಬೇಟೆ ಮುಂದುವರಿಸಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚಿಕ್ಲಿಹೊಳೆ ಡ್ಯಾಂ ಸಮೀಪ ಹುಲಿಯ ಬಾಯಿಗೆ, ಹಸುವೊಂದು ಆಹಾರವಾಗಿದೆ.
ಒಂದರ ಹಿಂದೊಂದರಂತೆ ಜಾನುವಾರುಗಳನ್ನ ಬೇಟೆಯಾಡ್ತಿರೋ ಹುಲಿರಾಯ, ಕಳೆದ 3 ತಿಂಗಳಲ್ಲಿ 40ಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ. ಇಂದು ಚಿಕ್ಲಿಹೊಳೆ ಡ್ಯಾಂ ಬಳಿ ಹಾಡಹಗಲೇ ಹಸುವಿನ ಮೇಲೆರಗಿರುವ ವ್ಯಾಘ್ರ, ಹಸುವನ್ನು ತಿಂದು ಮುಗಿಸಿದೆ. ಇದೀಗ ಹುಲಿಯ ಹೆಜ್ಜೆಯಿಂದ ಸ್ಥಳೀಯರಿಗೆ ಪ್ರಾಣ ಭಯ ಶುರುವಾಗಿದ್ದು, ಆದಷ್ಟು ಬೇಗ ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನ ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv