ಸೆರೆಸಿಕ್ಕಿದ್ದ ಹುಲಿ ಚಿಕಿತ್ಸೆ ಫಲಿಸದೆ ಸಾವು

ಮೈಸೂರು: ಎರಡು ದಿನಗಳ ಹಿಂದೆ ಅರಣ್ಯ ಇಲಾಖೆಗೆ ಹೆಚ್.ಡಿ. ಕೋಟೆಯ ಹೆಡಿಯಾಲ ಗ್ರಾಮಾದಲ್ಲಿ ಸೆರೆಸಿಕ್ಕಿದ್ದ ಹುಲಿ ಇಂದು ಮೈಸೂರಿನ ಮೃಗಾಲಯದಲ್ಲಿ ಸಾವನ್ನಪ್ಪಿದೆ. ಅರವಳಿಕೆ ಚುಚ್ಚು ಮದ್ದು‌ ನೀಡಿ‌ ಹುಲಿಯನ್ನು ಸೆರೆ ಹಿಡಿಯುವ ವೇಳೆ ಅದರ ತಲೆಗೆ ಪೆಟ್ಟು ಬಿದ್ದಿತ್ತು. ಬಳಿಕ ಮೈಸೂರಿನ ಮೃಗಾಲಯದಲ್ಲಿ ಹುಲಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಗಳು ಸೋಂಕಿಗೆ ತಿರುಗಿ, ಹುಲಿ ಇಂದು ಮುಂಜಾನೆ ಸಾವನ್ನಪ್ಪಿದೆ ಎಂದು ಮೈಸೂರು ಮೃಗಾಲಯದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹುಲಿಗಳ ಕಚ್ಚಾಟದ ವೇಳೆ ಗಾಯವಾಗಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:contact@firstnews.tv