ಹುಲಿರಾಯ ‘ಟ್ರಾಪ್ ಕ್ಯಾಮೆರಾದಲ್ಲಿ’ ಸೆರೆ! ಅರಣ್ಯ ಇಲಾಖೆ ಫುಲ್​ ಅಲರ್ಟ್​

ಕೊಡಗು: ಸುಮಾರು 40 ಜಾನುವಾರುಗಳನ್ನು ಕೊಂದು ತಿಂದಿರುವ ಹುಲಿರಾಯನ ಹೆಜ್ಜೆಗಳನ್ನ ಪತ್ತೆ ಹಚ್ಚಿದ್ದ ಅರಣ್ಯ ಇಲಾಖೆ, ಈಗ ಆ ಹುಲಿಯನ್ನೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಆದರೆ ಸದ್ಯಕ್ಕೆ, ಅದು ಇನ್ನೂ ‘ಟ್ರಾಪ್ ಕ್ಯಾಮೆರಾದಲ್ಲಿ’ ಸೆರೆಯಾಗಿದೆಯಷ್ಟೇ! 2 ದಿನಗಳ ಹಿಂದೆ ಕುಶಾಲನಗರ ಸಮೀಪದ ರಂಗಸಮುದ್ರ ಅರಣ್ಯ ವ್ಯಾಪ್ತಿಯ ಕುಟ್ಟನಹಳ್ಳ ಗ್ರಾಮದಲ್ಲಿ ರೈತರೊಬ್ಬರಿಗೆ ಸೇರಿದ ಹಸುವನ್ನು ಹಾಡಹಗಲೇ ಕೊಂದಿದ್ದ ಹುಲಿಯನ ಚಲನವಲನ ಟ್ರಾಪ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿಕ್ಲಿಹೊಳೆ ಜಲಾಶಯದಿಂದ ಕೂಗಳೆತೆಯಷ್ಟು ದೂರದಲ್ಲಿರುವ ಕುಟ್ಟನಹಳ್ಳ ಗ್ರಾಮದಲ್ಲಿನ ಹಸುವನ್ನ ಹುಲಿ ಕೊಂದಿತ್ತು. ಕೊಂದ ಬೇಟೆಗಾಗಿ ಹುಲಿ ಅಲ್ಲಿಗೆ ಮತ್ತೆ ಬರಬಹುದು ಎನ್ನುವ ಉದ್ದೇಶದಿಂದ ಹುಲಿಯ ಚಲನವಲನ ಗುರುತಿಸಲು ಅರಣ್ಯ ಇಲಾಖೆ ವತಿಯಿಂದ ಕ್ಯಾಮೆರಾ ಅಳವಡಿಸಲಾಗಿತ್ತು. ನಿರೀಕ್ಷೆಯಂತೆ, ಹಸು ಕೊಂದಿದ್ದಲ್ಲಿಗೆ ಬಂದಿದ್ದ ಹುಲಿ, ಸಾವಕಾಶವಾಗಿ ಗೋಮಾಂಸ ಭಕ್ಷಿಸಿ ವಾಪಸ್ ಮರಳಿರುವ ದೃಶ್ಯ ಸೆರೆಯಾಗಿದೆ.

 

 

 

 

 

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv