ಮುಂದುವರೆದ ಹುಲಿ ದಾಳಿಗೆ ಹಸು ಬಲಿ

ಕೊಡಗು: ಜಿಲ್ಲೆಯಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರೆದಿದೆ. ಕೆಲವು ದಿನಗಳ ಕಾಲ ಸುಮ್ಮನಿದ್ದ ಹುಲಿರಾಯ ಇದೀಗ ಮತ್ತೆ ನಾಡಿಗೆ ಎಂಟ್ರಿ ಕೊಟ್ಟಿದ್ದು, ಹಸುವೊಂದನ್ನು ಬಲಿ ಪಡೆದಿದ್ದಾನೆ. ವಿರಾಜಪೇಟೆ ತಾಲೂಕಿನ ಬೆಸಗೂರು ಗ್ರಾಮದ ಅರಮಣಮಾಡ ಮನು ಮಾದಯ್ಯ ಎಂಬುವವರ ತೋಟದಲ್ಲಿ ದಾಳಿಯಾಗಿದೆ. ತೋಟದೊಳಗೆ ಮೇಯಲು ಬಿಟ್ಟಿದ್ದ ಮಚ್ಚಮಾಡ ನಟೇಶ್ ಎಂಬುವವರಿಗೆ ಸೇರಿದ ಹಸುವನ್ನು ಕೊಂದುಹಾಕಿದೆ. ಸ್ಥಳಕ್ಕೆ ಪೊನ್ನಂಪೇಟೆ ಆರ್​​ಎಫ್​ಓ ಗಂಗಾಧರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.