ಹಸು ಹಿಡಿದುಕೊಂಡು ಹೋಗುತ್ತಿದ್ದಾಗ ಹುಲಿ ದಾಳಿ, ವ್ಯಕ್ತಿ ಜಸ್ಟ್ ಮಿಸ್..!

ಮೈಸೂರು: ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಹಸುವನ್ನ ಹಿಡಿದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಹುಲಿಯೊಂದು ದಾಳಿ ನಡೆಸಿ ಹಸುವನ್ನ ಕೊಂದ ಘಟನೆ ಹೆಚ್.ಡಿ. ಕೋಟೆ ತಾಲೂಕಿನ  ಬಂಡೀಪುರ ಅರಣ್ಯ ವ್ಯಾಪ್ತಿಯ ಎನ್.ಬೇಗೂರು ಮುಖ್ಯರಸ್ತೆಯ ಕಳಸೂರು ಗೇಟ್ ಬಳಿ ನಡೆದಿದೆ.

ಘಟನೆಯಲ್ಲಿ ಹಸುವಿನ ಮಾಲಿಕ ಕೊದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಇನ್ನು ಹುಲಿ ದಾಳಿ ನಡೆದ ನಂತರ ಹಸುವನ್ನ ಹುಲಿ ತಿನ್ನುತ್ತಿರುವುದನ್ನ  ನೋಡಿದ ಕಾರ್​ ಪ್ರಯಾಣಿಕ, ಬೈಕ್​ ಸವಾರರೊಬ್ಬರಿಗೆ ಹುಲಿ ಇದೆ ಅಂತಾ ಎಚ್ಚರಿಸುತ್ತ ಈ ದೃಶ್ಯವನ್ನ ಸೆರೆ ಹಿಡಿದಿದ್ದಾನೆ.

ಈ ಹಿಂದೆ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಡಿ.ಬಿ ಕುಪ್ಪೆ ವಲಯದ ಹಾಡಿಯೊಂದರಲ್ಲಿ ವ್ಯಾಘ ಮೂವರನ್ನು ಬಲಿ ಪಡೆದಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿ ಹುಲಿ ಸೆರೆ ಹಿಡಿದಿದ್ದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv