Tickets Sold Out: ‘ವಂದೇ ಭಾರತ್​​ ಎಕ್ಸ್​ಪ್ರೆಸ್’ ಕಮರ್ಷಿಯಲ್ ಸಂಚಾರ ಸ್ಟಾರ್ಟ್..!

ನವದೆಹಲಿ: ನಿನ್ನೆ ‘ವಂದೇ ಭಾರತ್​ ಎಕ್ಸ್​ಪ್ರೆಸ್’​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಸಂಬಂಧ ಟ್ವೀಟ್ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಮೇಕ್​ ಇನ್​ ಇಂಡಿಯಾ ಫೇಲ್ಯೂರ್ ಅಂತಾ ಹೇಳಿದ್ದರು. ಕೆಟ್ಟು ನಿಂತ ಟ್ರೈನ್​ ಫೋಟೋ ಅಪ್​ಲೋಡ್​ ಮಾಡಿದ್ದ ರಾಹುಲ್ ಗಾಂಧಿ, ಮೋದಿಜೀ ನನ್ನ ಪ್ರಕಾರ ನಿಮ್ಮ ಮೇಕ್​ ಇನ್​ ಇಂಡಿಯಾ ಬಗ್ಗೆ ಪುನರ್​​​ ವಿಮರ್ಶೆ ಮಾಡುವ ಅಗತ್ಯ ಇದೆ. ಹೆಚ್ಚಿನ ಜನರು ಅದು ಫೇಲ್​ ಆಗಿದೆ ಎಂದು ಭಾವಿಸಿದ್ದಾರೆ. ನಾನು ನಿಮಗೆ ಭರವಸೆ ನೀಡುತ್ತೇನೆ, ಈ ಬಗ್ಗೆ ಕಾಂಗ್ರೆಸ್​ ತುಂಬಾ ಆಳವಾಗಿ ಯೋಚಿಸಲಿದೆ ಅಂತಾ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ನಿನ್ನೆಯಷ್ಟೇ ಲೋಕಾರ್ಪಣೆಗೊಂಡ ವಂದೇ ಭಾರತ್​ ಎಕ್ಸ್​ಪ್ರೆಸ್​​ನಲ್ಲಿ ದೋಷ

ಇದಕ್ಕೆ ಖಾರವಾಗಿಯೇ ಉತ್ತರ ನೀಡಿದ್ದ ರೈಲ್ವೇ ಸಚಿವ ಪಿಯೂಷ್​ ಗೋಯಲ್, ದೇಶದ ಇಂಜಿನಿಯರ್ಸ್​, ಟೆಕ್ನಿಶಿಯನ್ಸ್​ ಹಾಗೂ ಲೇಬರ್ಸ್​ಗಳ ಕಠಿಣ ಪರಿಶ್ರಮವನ್ನ ಟೀಕಿಸುವ ನಿಮಗೆ ನಿಜಕ್ಕೂ ನಾಚಿಕೆ ಆಗಬೇಕು. ಮೇಕ್​ ಇನ್​ ಇಂಡಿಯಾ ಸಕ್ಸಸ್​ ಆಗಿದೆ. ನಿಮ್ಮ ಕುಟುಂಬ 6 ದಶಕಗಳಿಂದ ಯೋಚನೆ ಮಾಡಿದೆ. ನಿಮಗೆ ಅಷ್ಟು ಸಾಕಲ್ಲವೇ ಅಂತಾ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಶತಾಬ್ದಿಗಿಂತಲೂ ಫಾಸ್ಟ್​​, 360 ಡಿಗ್ರಿ ತಿರುಗೋ ಸೀಟ್ಸ್​​: ಭಾರತದ ಫಾಸ್ಟೆಸ್ಟ್​​ ಟ್ರೇನ್​​​ನಲ್ಲಿ ಇನ್ನೇನೇನಿದೆ? 

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದಿನಿಂದ ವಂದೇ ಭಾರತ್​ ಎಕ್ಸ್​ಪ್ರೆಸ್​ನ ಕಮರ್ಷಿಯಲ್ ಸಂಚಾರ ಆರಂಭವಾಗಿದ್ದು, ಮುಂದಿನ ಎರಡು ವಾರದವರೆಗೆ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ರೈಲ್ವೇ ಸಚಿವ ಪಿಯೂಷ್ ಗೋಯಲ್, ದೆಹಲಿ ರೈಲ್ವೇ ನಿಲ್ದಾಣದಿಂದ ಟ್ರೈನ್ ಮೂವ್ ಆಗುತ್ತಿರುವ ವಿಡಿಯೋ ತಮ್ಮ ಟ್ವಿಟರ್​​​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ‘Vande Bharat Express’ ಇಂದು ಮುಂಜಾನೆ ದೆಹಲಿಯಿಂದ ವಾರಣಾಸಿಗೆ ಪ್ರಯಾಣ ಬೆಳೆಸಿತು. ಈ ವಿಡಿಯೋವನ್ನ ಸಚಿವರು ಪೋಸ್ಟ್​ ಮಾಡಿದ್ದಾರೆ. ಜೊತೆಗೆ 2 ವಾರದವರೆಗೆ ಟಿಕೆಟ್​ ಸೋಲ್ಡ್​ಔಟ್​ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.