ಬ್ಯಾಡಗಿ ಕ್ಷೇತ್ರದಲ್ಲಿ ‘ಕೈ’ಗೆ ಹಾಲಿ ಶಾಸಕನಿಂದ ಬ್ಯಾಡಗಿ ಮಿರ್ಚಿ..!

ಹಾವೇರಿ: ಬ್ಯಾಡಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ಶಿವಣ್ಣನವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆ, ಹಾವೇರಿ ಕಾಂಗ್ರೆಸ್​​ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಹಾವೇರಿ ಶಿವಶಕ್ತಿ ಪ್ಯಾಲೇಸ್​​​​ನಲ್ಲಿ ಬಸವರಾಜ್‌ ಶಿವಣ್ಣ ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ಬೆಂಬಲಿಗರು ಒತ್ತಾಯಿಸುತ್ತಿದ್ದು, ಸಭೆಯ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಬಸವರಾಜ ಶಿವಣ್ಣ​ ತಿಳಿಸಿದ್ದಾರೆ. ಬ್ಯಾಡಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ​ನ್ನು ಎಸ್.ಆರ್.ಪಾಟೀಲ್​​​​​ಗೆ ನೀಡಲಾಗಿದೆ.

Leave a Reply

Your email address will not be published. Required fields are marked *