ಗಂಡು ಮಗು ಆಗದಿದ್ದಕ್ಕೇ ಹೆಣ್ಣುಮಕ್ಕಳನ್ನ ಬಾವಿಗೆ ತಳ್ಳಿದ ತಾಯಿ..

ಚಿಕ್ಕಬಳ್ಳಾಪುರ: ಗಂಡು ಮಗು ಆಗಲಿಲ್ಲ ಎಂದು ಬೇಸತ್ತು, ತನ್ನ ಮೂರು ಹೆಣ್ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಿಕ್ಕಬಳ್ಳಾಪುರ ತಾಲೂಕಿನ ಕಾಕಲಚಿಂತೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ನವ್ಯಶ್ರೀ(6), ದಿವ್ಯಶ್ರೀ(3), ಹಾಗೂ ಮೂರು ತಿಂಗಳ ಹೆಣ್ಣು ಮಗುವಿನೊಂದಿಗೆ ತಾಯಿ ನಾಗಶ್ರೀ(30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಕಲಚಿಂತೆ ಗ್ರಾಮದ ಗಂಗರಾಜು ಜೊತೆ ನಾಗಶ್ರೀಯನ್ನ ಏಳು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಒಂದಾದರಂತೆ ಒಂದು ಹೆಣ್ಣುಮಕ್ಕಳು ಜನಿಸಿದ್ದರು. ನಾಗಶ್ರೀ ತಮ್ಮ ಸಂಸಾರಕ್ಕೆ ಗಂಡು ಮಗು ಹುಟ್ಟಲಿಲ್ಲವಲ್ಲ ಎಂದು ಕೊರಗುತ್ತಿದ್ದರು. ಗುರುವಾರ ಗ್ರಾಮದ ಹೊರವಲಯದಲ್ಲಿರುವ ಬಾವಿಗೆ ತನ್ನ ಮೂರು ಮಕ್ಕಳನ್ನು ತಳ್ಳಿ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಗ್ರಾಮಕ್ಕೆ ಎಸ್​ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *