ಅಕ್ರಮವಾಗಿ ದನ ಸಾಗಾಟ, ಮೂವರು ಆರೋಪಿಗಳ ಬಂಧನ

ಚಿಕ್ಕಮಗಳೂರು: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ವೆಂಕಟೇಶ್, ನರಸಿಂಹಮೂರ್ತಿ ಹಾಗೂ ಭಾರ್ಗವ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಬಾಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಐಚರ್ ವಾಹನದಲ್ಲಿ 15 ಕ್ಕೂ ಹೆಚ್ಚು ದನಗಳನ್ನ ತುಂಬಿಕೊಂಡು ಹೋಗುತ್ತಿದ್ದರು. ವಾಹನದ ಸಂಖ್ಯೆ ಮುಂದೆ ಕೆಎ 05, ಇ4462 ಅಂತಾ ಇದ್ದರೆ, ಹಿಂದೆ ಕೆಎ 01ಎಬಿ4525 ಅಂತಾ ಇತ್ತು. ಇದರಿಂದ ಅನುಮಾನಗೊಂಡ ಬಾಳೂರು ಪೊಲೀಸರು ವಾಹನ ತಪಾಸಣೆ ಮಾಡಿದಾಗ 15 ಕ್ಕೂ ಹೆಚ್ಚು ದನಗಳನ್ನು ಅಕ್ರಮವಾಗಿ ತುಂಬಿರೋದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದರೆ, ಮತ್ತೊಬ್ಬ ಆರೋಪಿ ವಾಹನ ಚಾಲನ ಶಶಿಧರ ಪರಾರಿಯಾಗಿದ್ದಾನೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv