ಮೆಡಿಸಿನ್ ಕಂಪನಿಯಲ್ಲಿ 3 ನೌಕರರು ಉಸಿರುಗಟ್ಟಿ ಸಾವು.!

ರಾಮನಗರ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಅಂತಮ್ ಬಯೋ ಸೈನ್ಸ್ ಎಂಬ ಮೆಡಿಸಿನ್ ಕಂಪನಿಯಲ್ಲಿ ಮೂವರು ನೌಕರರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಕಳೆದ ರಾತ್ರಿ ನಡೆದಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್, ಲೋಕೇಶ್ ಹಾಗೂ ಶರವಣ ಮೃತ ನೌಕರರು. 9 ಅಡಿ ಆಳದ ವೆಸಲ್​ಗೆ ಮೂವರು ನೌಕರರನ್ನ ಇಳಿಸಲಾಗಿತ್ತು. ಈ ವೇಳೆ ಆಕ್ಸಿಜನ್ ಬ್ಲಾಕ್ ಅಗಿ ಮೂವರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಲೋಕೇಶ್ ಮತ್ತು ಮಹೇಶ್ ಇಬ್ಬರಿಗೂ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಈ ಬಗ್ಗೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.