ಬೈಕ್​ಗಳ ಮುಖಾಮುಖಿ: ಮೂವರ ಸಾವು

ತುಮಕೂರು: ಎರಡು ಬೈಕ್​ಗಳು ಮುಖಾಮುಖಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಪಾವಗಡ ತಾಲೂಕಿನ ಕಣವೇಣಹಳ್ಳಿ ಬಳಿ ಸಂಭವಿಸಿದೆ.  ಮೃತಪಟ್ಟ ಮೂವರು ಪಾವಗಡ ಮೂಲದವರೆಂದು ತಿಳಿದು ಬಂದಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ವೇಗವೇ ಕಾರಣ ಎನ್ನಲಾಗುತ್ತಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ಗಳು ನುಜ್ಜುಗುಜ್ಜಾಗಿವೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv