ಪ್ರಯಾಣಿಕರೇ ಸಹಕರಿಸಿ, 3ದಿನ ಬಸ್ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ಏಪ್ರಿಲ್‌ 18 ರಂದು ಮತದಾನ ಇರೋದ್ರಿಂದ ಕೆಎಸ್​​ಆರ್​ಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಚುನಾವಣೆಯ ಹಿಂದಿನ ಎರಡು ದಿನ ಹಾಗೂ ಚುನಾವಣೆಯ ದಿನ ಅಂದ್ರೆ ಏಪ್ರಿಲ್ 16, 17, 18 ರಂದು ಕೆಎಸ್​​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಚುನಾವಣೆ ಕಾರ್ಯಭಾರ ನಿಮಿತ್ತ
ಚುನಾವಣೆ ಕಾರ್ಯಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮತ್ತು ಚುನಾವಣೆ ಆಯೋಗಕ್ಕೆ ಕೆಎಸ್​​ಆರ್​ಟಿಸಿ 3314 ಬಸ್​ಗಳನ್ನ ಆಯೋಜನೆ ಮಾಡಲಾಗಿದೆ. ಹೀಗಾಗಿ ರಾಜ್ಯದ ಪ್ರಯಾಣಿಕರು ಸಹಕರಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv