ಹಚ್ಚೆ ಗುರುತಿನಿಂದ ಕೊಲೆ ಕೇಸ್ ಬೇಧಿಸಿದ ಪೊಲೀಸರು..!

ದಾವಣಗೆರೆ: ಮಗನನ್ನೇ ಕೊಲೆ ಮಾಡಿ ನಾಲೆಗೆ ಬೀಸಾಕಿದ್ದ ತಂದೆ ಸೇರಿದಂತೆ ಮೂವರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಕೈ ಮೇಲಿನ ಹಚ್ಚೆ ಗುರುತಿನಿಂದ ಪ್ರಕರಣ ಬೇಧಿಸಿ, ಮೂವರು ಆರೋಪಿಗಳನ್ನು ಬಂಧಿಸಿರುವುದು ವಿಶೇಷ. ಚನ್ನಗಿರಿ ತಾಲೂಕಿನ ತೋಪೆನಹಳ್ಳಿಯ ಮೃತ ಜಗದೀಶ್ ತಂದೆ ಹನಮಂತಪ್ಪ, ಸೋದರ ರಂಗಸ್ವಾಮಿ, ಭಾವ ತಿಪ್ಪೇಸ್ವಾಮಿ ಬಂಧಿತ ಆರೋಪಿಗಳು.

ಜಗದೀಶ್, ಕುಡಿದು ಬಂದು ಜಗಳ ಮಾಡುತ್ತಾನೆ ಎಂದು ಮೂವರು ಆರೋಪಿಗಳು ಅಕ್ಟೋಬರ್ 3 ರಂದು ಆತನನ್ನ ಕೊಂದು ನಾಲೆಯಲ್ಲಿ ಬಿಸಾಕಿದ್ದರು. ಜಗದೀಶ್ ಶವ ಅಕ್ಟೋಬರ್ 17 ರಂದು ಶಿರಮಗೊಂಡನಹಳ್ಳಿ ಬಳಿಯ ನಾಲೆಯಲ್ಲಿ ಪತ್ತೆಯಾಗಿತ್ತು. ಶವ ಪರೀಕ್ಷೆ ನಡೆಸಿದಾಗ ಜಗದೀಶ್​ನ ಕೈ ಮೇಲೆ ಬಾಲಾಜಿ, ಅರ್ಜುನ್ ಎಂಬ ಹಚ್ಚೆ ಪತ್ತೆಯಾಗಿತ್ತು. ಈ ಹಚ್ಚೆ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಆತ ಜಗಳ ಮಾಡುತ್ತಿರುವುದರಿಂದ ರೋಸಿಹೋಗಿದ್ದ ಮನೆಯವರು ಈತನನ್ನು ಮನೆಯಲ್ಲಿಯೇ ಕೊಲೆ ಮಾಡಿ ನಾಲೆಗೆ ಬಿಸಾಕಿದ್ದರು. 15 ದಿನಗಳ ಬಳಿಕ ಶವ ಪತ್ತೆಯಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv