ಕುದಿರಿಮೋತಿ ಕೊಲೆ ಪ್ರಕರಣ: 3 ಆರೋಪಿಗಳ ಬಂಧನ..!

ಕೊಪ್ಪಳ: ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜೂನ್ 9 ರಂದು ಯಲಬುರ್ಗಾದ ಕುದಿರಿಮೋತಿಯ ಹೊರವಲಯದಲ್ಲಿ ಚಿಲಕಮುಖಿ ಗ್ರಾಮದ ಹನುಮಂತಪ್ಪ ದಳಪತಿ ಎಂಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಬೇವುರೂ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.

ಆರೋಪಿಗಳು ಯಲಬಯರ್ಗಾ ತಾಲೂಕಿನ ಚಿಲಕಮುಖಿ ಮೂಲದ ವೀರಣ್ಣ ( 37), ಪುಣ್ಯಮೂರ್ತಿ ( 51) ಮತ್ತು ರಮೇಶ್ ( 30). ಕೊಲೆಯಾದ ಹನುಮಂತಪ್ಪನಿಗೆ ಆರೋಪಿ ವೀರಣ್ಣನ ಪತ್ನಿಯ ಜೊತೆ ಅನೈತಿಕ ಸಂಬಂಧವಿತ್ತು. ಇದ್ರಿಂದ ರೊಚ್ಚಿಗೆದ್ದ ಆರೋಪಿಗಳು ಹನುಮಂತಪ್ಪನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣವನ್ನು ಬೆನ್ನತ್ತಿದ್ದ ಕೊಪ್ಪಳ ಗ್ರಾಮಾಂತರ ಠಾಣಾ ಪೊಲೀಸರು ಡಿವೈಎಸ್ಪಿ ಸಂದಿಗವಾಡ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv