‘ಪಡ್ಡೆಹುಲಿ’ ಜೊತೆ ‘ತ್ರಯಂಬಕ’ನ ಆಗಮನ..!

ಸ್ಯಾಂಡಲ್​ವುಡ್​ನಲ್ಲಿ ಕಳೆದ ವಾರ ಒಂದಷ್ಟು ಇಂಟರೆಸ್ಟಿಂಗ್ ಸಿನಿಮಾಗಳು ರಿಲೀಸ್ ಆಗಿದ್ದವು. ಈ ವಾರವೂ ಮಾಸ್​-ಕ್ಲಾಸ್ ಸಿನಿಮಾಗಳು ರಿಲೀಸ್ ಆಗ್ತಿವೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಟನೆಯ ಚೊಚ್ಚಲ ಸಿನಿಮಾ ಪಡ್ಡೆಹುಲಿ ಆರಂಭದಿಂದಲೇ ಕ್ರೇಜ್ ಸೃಷ್ಟಿಸಿತ್ತು.

ತೆರೆಮೇಲೆ ಪಡ್ಡೆಹುಲಿ ಘರ್ಜನೆ
ಇಂದು ರಾಜ್ಯಾದ್ಯಂತ ಪಡ್ಡೆಹುಲಿ ರಿಲೀಸ್ ಆಗಿದೆ. ಹಲವು ಕಾರಣಗಳಿಂದ ಚಿತ್ರ ಭರವಸೆ ಮೂಡಿಸಿದೆ. ಗುರುದೇಶಪಾಂಡೆ ನಿರ್ದೇಶನ ಇರೋದ್ರಿಂದ ಪ್ರೇಕ್ಷಕರನ್ನು ಸೆಳೆಯುವ ಸೂಚನೆ ಕೊಟ್ಟಿದೆ. ಗುರುದೇಶ್​ ಪಾಂಡೆ ನಿರ್ದೇಶನದ ರೊಮ್ಯಾಂಟಿಕ್ ಯೂಥ್ ಎಂಟ್ರಟ್ರೈನರ್. ಕ್ರೇಜಿಸ್ಟಾರ್ ರವಿಚಂದ್ರನ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್​ರಂತಹ ಸ್ಟಾರ್ಸ್ ಬಣ್ಣ ಹಚ್ಚಿರೋ ಬಹುನಿರೀಕ್ಷಿತ ಚಿತ್ರ.. ದೊಡ್ಡ ಸಿಂಗರ್ ಆಗಬೇಕು ಅನ್ನೋ ಕನಸು ಕಾಣುವ ಯುವಕನಾಗಿ ಶ್ರೇಯಸ್ ಬಣ್ಣ ಹಚ್ಚಿದ್ದಾರೆ. ಅವರ ತಂದೆಯ ಪಾತ್ರದಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್​ ಕಾಣಿಸಿಕೊಂಡಿದ್ದು ಮನೆದೇವ್ರು ನಂತ್ರ ಸುಧಾರಾಣಿ ಈ ಚಿತ್ರದಲ್ಲಿ ಅವರಿಗೆ ಜೊತೆಯಾಗಿದ್ದಾರೆ.. ಶ್ರೇಯಸ್​ಗೆ ತಂದೆಯಾಗಿ ಗುರುವಾಗಿ ಚಾಮಯ್ಯ ಮೇಷ್ಟ್ರು ರೀತಿಯ ತೂಕದ ಪಾತ್ರದಲ್ಲಿ ರವಿಮಾಮ ನಟಿಸಿದ್ದಾರೆ. ಚಿತ್ರದಲ್ಲಿ ಅವ್ರರದ್ದು ಕನ್ನಡ ಮೇಷ್ಟ್ರ ಪಾತ್ರ. ಪಡ್ಡೆಹುಲಿ ಸಿನಿಮಾದಲ್ಲಿ ಕಿರಿಕ್​ ಪಾರ್ಟಿ ಕರ್ಣನ ಪಾತ್ರವನ್ನ ರಕ್ಷಿತ್​ ಶೆಟ್ಟಿ ಮುಂದುವರೆಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಪಡ್ಡೆಹುಲಿ ಸಿನಿಮಾದಲ್ಲೂ ಪುನೀತ್​ ರಾಜ್​ಕುಮಾರ್ ಆಗಿಯೇ ಕಾಣಿಸಿಕೊಳ್ತಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್​ನಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿರೋ ಅಪ್ಪು, ಪ್ರೇಕ್ಷಕರಿಗೆ ಥ್ರಿಲ್ ಕೊಡಲಿದ್ದಾರೆ.

ಸಸ್ಪೆನ್ಸ್ ಹೆಚ್ಚಿಸದ ತ್ರಯಂಬಕಂ
ಇನ್ನೊಂದೆಡೆ, ರಾಘವೇಂದ್ರ ರಾಜ್​ಕುಮಾರ್​ ‘ಅಮ್ಮನ ಮನೆ’ ನಂತರ ನಟಿಸಿರೋ ಸಿನಿಮಾ ತ್ರಯಂಬಕಂ ಥ್ರಿಲ್ಲಿಂಗ್ ಸ್ಟೋರಿಯಿಂದ ಸಿನಿಮಾ ಈಗಾಗಲೇ ಕುತೂಹಲ ಹುಟ್ಟಿಸಿದೆ. ದಯಾಳ್ ಪದ್ಮನಾಭನ್ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಅನುಪಮಾ ಗೌಡ ಹಾಗೂ ರಾಘವೇಂದ್ರ ರಾಜ್ ಕುಮಾರ್ ತಂದೆ ಮಗಳಾಗಿ ಕಾಣಿಸಿಕೊಂಡಿದ್ದಾರೆ. ರಾಕ್ ಸ್ಟಾರ್ ರೋಹಿತ್, ಶಿವಮಣಿ ಕೂಡ ಈ ಚಿತ್ರದಲ್ಲಿದ್ದಾರೆ. ಫಸ್ಟ್ ಟೈಂ ನವ ಪಾಷಾಣ ಎಂಬ ವಿಷಯವನ್ನು ಸಿನಿಮಾದಲ್ಲಿ ತಂದಿದ್ದು ಅಪ್ಪ-ಮಗಳ ನಡುವಿನ ಸುಂದರ ಕಥೆ ಚಿತ್ರದಲ್ಲಿದೆ. ಇನ್ನು, ಥಿಯೇಟರ್​ನಲ್ಲಿ ಈ 2 ಚಿತ್ರಗಳು ಜನರನ್ನು ಹೇಗೆ ಸೆಳೆಯಲಿದೆ ಅನ್ನೋದು ಇಂದು ಗೊತ್ತಾಗಲಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv