ಈ ತಿತ್ಲಿ, ಚಂಡಮಾರುತ ಅಲ್ಲ..ಹಾಗಾದ್ರೆ?

ಒಡಿಶಾ : ನಿನ್ನೆಯಷ್ಟೆ ಒಡಿಶಾದಲ್ಲಿ ತಿತ್ಲಿ ಚಂಡಮಾರುತ ಅಬ್ಬರಿಸಿ ಅಪಾರ ಪ್ರಮಾಣದ ಹಾನಿ ಉಂಟುಮಾಡಿತ್ತು. ಆದರೂ ಅಲ್ಲಿಯ ಮಂದಿ ತಿತ್ಲಿ ಚಂಡಮಾರುತದ ಮೇಲೆ ಒಂದು ರೀತಿಯ ಪ್ರೇಮವನ್ನ ತೋರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಜನಿಸಿದ ಹೆಣ್ಣು ಮಗುವಿಗೆ ತಿತ್ಲಿ ಅಂತಾನೆ ಹೆಸರು ನಾಮಕರಣ ಮಾಡಲಾಗಿದೆ. ನಿನ್ನೆ ಒಡಿಶಾದ ಗಂಜಮ್​ ಜಿಲ್ಲೆಯ ಗೀತಾಂಜಲಿ ಗೌಡ ಎಂಬುವವರಿಗೆ ರಾತ್ರಿ 11 ಗಂಟೆ ಸಮಯದಲ್ಲಿ ಮಗುವಾಗಿದೆ. ಇದೇ ಸಮಯದಲ್ಲಿ ತಿತ್ಲಿ ಹೆಸರಿನ ಸೈಕ್ಲೋನ್​ ಕೂಡ ಬೀಳುತ್ತಿದ್ದು, ಇದನ್ನು ಗಮನಿಸಿದ ಕುಟುಂಬಸ್ಥರು ಮಗುವಿಗೂ ಇದೇ ಹೆಸರನ್ನು ಇಟ್ಟಿದ್ದಾರೆ ಅಂತಾ ಮಗುವಿನ ತಂದೆ ದಿಲೀಪ್​ ಹೇಳಿದ್ದಾರೆ. ಇನ್ನು ಈ ಮಗುವು ಆಸ್ಕ ಆರೋಗ್ಯ ಕೇಂದ್ರದಲ್ಲಿ ಜನಿಸಿದ್ದು ತಾಯಿ ಮತ್ತು ಮಗುವು ಆರೋಗ್ಯವಾಗಿದ್ದಾರೆ ಅಂತಾ ವೈದ್ಯ ಮೋಹನ್​ ಬರಿಕ್​ ತಿಳಿಸಿದ್ದಾರೆ. ಇನ್ನೊಂದು ವಿಶೇಷತೆ ಎಂದರೆ ಇದೇ ಆಸ್ಪತ್ರೆಯಲ್ಲಿ ಮತ್ತೊಬ್ಬ ಮಹಿಳೆ ಅಲ್ಲೆಮ್ಮ ಕೂಡ ತನಗೆ ಜನಿಸಿರುವ ಅವಳಿ ಮಕ್ಕಳ ಪೈಕಿ ಒಂದಕ್ಕೆ ತಿತ್ಲಿ ಎಂದು ನಾಮಕರಣ ಮಾಡುತ್ತೇನೆ ಎಂದಿದ್ದಾರೆ. ಇನ್ನು ಈ ಆಸ್ಪತ್ರೆಯಲ್ಲಿ ಕಳೆದ ಮಂಗಳವಾರ ಮತ್ತು ಬುಧವಾರ ರಾತ್ರಿ ಜನಿಸಿರುವ ಮಕ್ಕಳೆಲ್ಲರೂ ಹೆಣ್ಣು ಮಕ್ಕಳೆನ್ನುವುದು ವಿಶೇಷ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv