ಬಯೋಪಿಕ್​ನಲ್ಲಿ ಪ್ರಧಾನಿ ಪತ್ನಿಯಾಗಿ ಮಿಂಚಲಿದ್ದಾರೆ ಬರ್ಕಾ

ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಸಿನಿಮಾಗಳು ಒಂಥರಾ ಟ್ರೆಂಡ್​ ಆಗೋಗಿದೆ. ಅದ್ರಲ್ಲೂ ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಸಿನಿಮಾ, ಫಸ್ಟ್​ಲುಕ್​ ಬಿಡುಗಡೆಯಾಗಿನಿಂದ ಸುದ್ದಿಯಲ್ಲಿದೆ. ಪ್ರಧಾನಿ ಪಾತ್ರದಲ್ಲಿ ವಿವೇಕ ಒಬೆರಾಯ್ ನಟಿಸುತ್ತಿದ್ದಾರೆ.
ಆದ್ರೆ, ಈ ಬಯೋಪಿಕ್​ನಲ್ಲಿ ಪ್ರಧಾನಿಯ ಪತ್ನಿಯ ಪಾತ್ರವನ್ನ ಯಾರು ನಿರ್ವಹಿಸ್ತಾರೆ ಅನ್ನೋ ಕುತೂಹಲ ಇತ್ತು. ಇದೀಗ ಆ ಸಸ್ಪೆನ್ಸ್​ಗೂ ತೆರೆ ಬಿದ್ದಿದ್ದು, ಹಿಂದಿ ಕಿರುತೆರೆಯ ಸ್ಟಾರ್ ನಟಿ ಬರ್ಕಾ ಬಿಷ್ಟ್ ಸೇನ್​ಗುಪ್ತಾ ಕಾಣಿಸಿಕೊಳ್ಳಲಿದ್ದಾರೆ. ಬರ್ಕಾ ಈ ಹಿಂದೆ ರಾಮ್​-ಲೀಲಾ ಮತ್ತು ರಾಜ್​ನೀತಿ ಚಿತ್ರಗಳಲ್ಲಿ ಉತ್ತಮ ಪಾತ್ರಗಳಲ್ಲಿ ನಟಿಸಿದ್ದು, ತಮ್ಮ ಟ್ಯಾಲೆಂಟ್ ಪ್ರೂ ಮಾಡಿದ್ರು. ಇದೀಗ ಮೋದಿ ಚಿತ್ರದಲ್ಲಿ ಚಾನ್ಸ್ ಗಿಟ್ಟಿಸಿದ್ದಾರೆ.
ಮೇರಿ ಕೋಮ್ ಚಿತ್ರದ ನಿರ್ದೇಶಕ ಒಮಂಗ್ ಕುಮಾರ್ ಮೋದಿ ಬಯೋಪಿಕ್​ಗೂ ಌಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರಕ್ಕೆ ಪಿಎಂ ನರೇಂದ್ರ ಮೋದಿ ಅಂತ ಹೆಸರಿಡಲಾಗಿದ್ದು, ಜಶೋದಾ ಬೆನ್ ಪಾತ್ರದಲ್ಲಿ ಬರ್ಕಾ ಮಿಂಚೋಕೆ ರೆಡಿಯಾಗಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv