ತನ್ನ ಪ್ರಾಣದ ಹಂಗು ತೊರೆದು ಬೆಂಕಿಯ ಕೆನ್ನಾಲಿಗೆಯಿಂದ ಬಾಲಕಿಯರನ್ನ ರಕ್ಷಿಸಿದ ಪುಣ್ಯಾತ್ಮ..!

ಸೂರತ್: ಗುಜರಾತ್​ನ ಸೂರತ್​​ನಲ್ಲಿ ನಿನ್ನೆ ನಡೆದ ಅಗ್ನಿ ದುರಂತದಲ್ಲಿ ವ್ಯಕ್ತಿಯೊಬ್ಬರು ಇಬ್ಬರು ಬಾಲಕಿಯರನ್ನ ರಕ್ಷಣೆ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಲ್ಲಿನ 4 ಅಂತಸ್ತಿನ ತಕ್ಷಶಿಲ ಕಾಂಪ್ಲೆಕ್ಸ್​​ನ ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ ಹೊತ್ತಿ ಉರಿದ ಪರಿಣಾಮ 19 ವಿದ್ಯಾರ್ಥಿಗಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ. ಬೆಂಕಿ ಹತ್ತಿಕೊಂಡ ತಕ್ಷಣವೇ ಮಹಡಿಯಲ್ಲಿದ್ದ ಕೆಲವರು ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್​ನಿಂದ ಹಾರಿದ್ದಾರೆ. ಇನ್ನೂ ಕೆಲವರು ಬೆಂಕಿಯ ಕೆನ್ನಾಲಿಗೆಗೆ ಅಲ್ಲಿಯೇ ಸಜೀವ ದಹನಗೊಂಡಿದ್ದಾರೆ.

ಜೊತೆಗೆ ರಕ್ಷಣೆಗಾಗಿ 18ಕ್ಕೂ ಹೆಚ್ಚು ಅಗ್ನಿಶಾಮ ಸಿಬ್ಬಂದಿ ಕೂಡ ಸ್ಥಳಕ್ಕೆ ದೌಡಾಯಿಸಿದ್ದರು. ಇದರ ಮಧ್ಯೆ ವ್ಯಕ್ತಿಯೊಬ್ಬರು ಅಪಾಯವನ್ನೂ ಲೆಕ್ಕಿಸದೇ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಮುಂದಾಗಿ ಇಬ್ಬರು ಬಾಲಕಿಯರ ಜೀವ ಉಳಿಸಿದ್ದಾರೆ. ಕೇತನ್ ಜೊರವಾಡಿಯಾ ಅನ್ನೋ ವ್ಯಕ್ತಿ ಇಬ್ಬರು ಬಾಲಕಿಯರನ್ನ ರಕ್ಷಣೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ, ಬೆಂಕಿ ಕಾಣಿಸಿಕೊಂಡು ರಕ್ಷಣೆಗಾಗಿ ಕೂಗುತ್ತ ಬಿಲ್ಡಿಂಗ್​ನಿಂದಲೇ ಹಾರುತ್ತಿದ್ದರು. ಇದೇ ವೇಳೆ ಕೇತನ ಕಟ್ಟಡದ ಎರಡನೇ ಮಹಡಿಯ ಮುಂಬದಿಯಿಂದ ನಿಂತು ಇಬ್ಬರು ಬಾಲಕಿಯರನ್ನ ಸುರಕ್ಷಿತವಾಗಿ ಇಳಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕೇನತ್ ಜೊರವಾಡಿಯಾಗೆ ಪ್ರಶಂಸೆಗಳ ಸುರಿಮಳೆ ಬರುತ್ತಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv