ಇದು ಬಿಬಿಎಂಪಿ ಬಜೆಟ್ಟೋ? ರಾಜ್ಯದ ಬಜೆಟ್ಟೋ?: ಹೆಚ್‌.ಕೆ.ಪಾಟೀಲ್ ಆಕ್ರೋಶ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಮಂಡನೆ ಮಾಡಿದ ಮೊದಲ ಬಜೆಟ್‌ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಿಂದಲೇ ಅಪಸ್ವರ ಎದ್ದಿದೆ. ಸದನದಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಶಾಸಕ ಹೆಚ್.ಕೆ.ಪಾಟೀಲ್, ಬಜೆಟ್​ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಉತ್ತರ ಕರ್ನಾಟಕಕ್ಕೆ ಕೊಟ್ಟಿರುವ ಅನುದಾನ ಪ್ರಮಾಣ ಕಡಿಮೆ ಎಂದರು. ಅಲ್ಲದೇ, ಬಿಬಿಎಂಪಿಗೆ ಉತ್ತರ ಕರ್ನಾಟಕಕ್ಕಿಂತ ಹೆಚ್ಚು ಅನುದಾನ ಕೊಡಲಾಗಿದೆ. ಇದು ಬಿಬಿಎಂಪಿ ಬಜೆಟ್ಟೋ ಅಥವಾ ಇಡೀ ರಾಜ್ಯದ ಬಜೆಟ್ಟೋ ಅನ್ನುವ ಅನುಮಾನ ಕಾಡುತ್ತದೆ ಎಂದು ಅಂಕಿ ಅಂಶಗಳ ಸಹಿತ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv