ನಾಲಿಗೆಯಿಂದ ಹಣೆ ಮುಟ್ಟಿಸೋ ಈ ಕನ್ನಡದ ನಟ ಈಗ ವರ್ಲ್ಡ್​ ಫೇಮಸ್​..!

ಇವರನ್ನ ನೀವು ಕನ್ನಡದ ಕೆಲವು ಸಿನಿಮಾ ಹಾಗೂ ಸೀರಿಯಲ್​​ಗಳಲ್ಲಿ ನೋಡಿರ್ತೀರ. ತನ್ನ ವಿಶಿಷ್ಟ ಆ್ಯಕ್ಟಿಂಗ್​​​ ಮೂಲಕ ಕಾಮಿಡಿ ಸೀನ್​​ಗಳಲ್ಲಿ ನಟಿಸಿ ಜನರನ್ನ ನಕ್ಕು ನಗಿಸೋ ಯಜ್ಞ ಬಹದ್ದೂರ್​​ ಕತುವಾಲ್​, ಈಗ ವಿಶಿಷ್ಟವಾದ ಟ್ಯಾಲೆಂಟ್​ ಮೂಲಕ ಸುದ್ದಿಯಾಗಿದ್ದಾರೆ.

ನಾಲಿಗೆಯಿಂದ ಮೂಗು ಮುಟ್ಟಿಸೋದೇ ಕಷ್ಟ. ಕೆಲವರು ಇದನ್ನ ಮಾಡಿ ತೋರಿಸಿದವರೂ ಇದ್ದಾರೆ. ಆದ್ರೆ ಬಹದ್ದೂರ್​ ಇವರೆಲ್ಲರಿಗಿಂತ ಒಂದು ಕೈ ಮೇಲೆ. ಯಾಕಂದ್ರೆ ಇವರು ತಮ್ಮ ನಾಲಗೆಯಿಂದ ಹಣೆಯನ್ನೇ ಮುಟ್ಟಿಸುತ್ತಾರೆ . ನೇಪಾಳದ ಉರ್ಲಾಬರಿ ಮೂಲದವರಾದ 35 ವರ್ಷದ ಬಹದ್ದೂರ್​, ಶಾಲಾ ಬಸ್​ ಡ್ರೈವರ್​​ ಆಗಿ ಕೆಲಸ ಮಾಡಿಕೊಂಡಿದ್ದಾರೆ.

 

ತನಗೆ ಜಗತ್ತಿನಲ್ಲೇ ಅತ್ಯಂತ ಉದ್ದವಾದ ನಾಲಿಗೆ ಇದೆ. ವಿಶ್ವದಲ್ಲೇ, ನಾಲಿಗೆಯಿಂದ ಹಣೆಯನ್ನು ಮುಟ್ಟಿಸಬಲ್ಲ ವ್ಯಕ್ತಿ ನಾನೊಬ್ಬನೇ ಎಂದು ಬಹದ್ದೂರ್​ ಹೇಳಿದ್ದಾರೆ. ಇಷ್ಟೆ ಅಲ್ಲ ಬಹದ್ದೂರ್​ ತಮ್ಮ ತುಟಿಯ ಮೂಲಕ ಮೂಗನ್ನೇ ಕಾಣದಂತೆ ಮಾಡೋ ಟ್ರಿಕ್ ಹಾಗೂ ಬುಲೆಟ್​​ ಬೈಕ್​ನಂತೆ ಸೌಂಡ್​ ಮಾಡೋ ಟ್ಯಾಲೆಂಟ್​ ಕೂಡ ಹೊಂದಿದ್ದಾರೆ. ಇವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಾಧ್ಯಮದಲ್ಲೂ ಇವರ ಬಗ್ಗೆ ವರದಿಯಾಗಿದೆ.

ಇನ್ನು ಯಾವಾಗ್ಲೂ ನಾಲಿಗೆಯಿಂದ ತಲೆಯನ್ನು ಮುಟ್ಟಿಸುವುದು ಮಾಡಲ್ಲ. ಯಾಕಂದ್ರೆ ಇದರಿಂದ ಮಕ್ಕಳಿಗೆ ಭಯವಾಗುತ್ತೆ. ನನಗೇನಾದ್ರೂ ಹಾರರ್​ ಸಿನಿಮಾದಲ್ಲಿ ಅಭಿನಯಿಸೋ ಅವಕಾಶ ಸಿಕ್ಕರೆ, ಜನರನ್ನ ಹೆದರಿಸಲು ಮೇಕಪ್​ ಮಾಡಿಕೊಳ್ಳೊ ಅಗತ್ಯವೇ ಇಲ್ಲ ಅಂತಾರೆ ಬಹದ್ದೂರ್​. ತಮ್ಮ ಈ ವಿಶಿಷ್ಟ ಟ್ಯಾಲೆಂಟ್​ ಮೂಲಕ ಬಹದ್ದೂರ್​ ಈಗ ಗಿನ್ನಿಸ್​ ದಾಖಲೆ ಮಾಡೋ ಹಂಬಲದಲ್ಲಿದ್ದಾರೆ.