ಥರ್ಡ್ ಡಿಗ್ರಿ ಟ್ರೀಟ್​ಮೆಂಟ್​ ನೀಡುವುದು ಮಾನವ ಹಕ್ಕು ಉಲ್ಲಂಘನೆ : ಹೈಕೋರ್ಟ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ತಮ್ಮನ್ನು ಆರೋಪಿಗಳನ್ನಾಗಿ ಮಾಡದಂತೆ ನಿರ್ಬಂಧ ಕೋರಿ ಆರೋಪಿಗಳು ಕೋರ್ಟ್​ಗೆ ಮನವಿ ಮಾಡಿದ್ದರು.

ಅಲ್ಲದೇ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್​ಮೆಂಟ್ ನೀಡುತ್ತಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಆರೋಪಿಗಳಾದ ಸುಜಿತ್ ಅಲಿಯಾಸ್​ ಪ್ರವೀಣ್, ಅಮೂಲ್ ಕಾಳೆ, ಅಮಿತ್ ದಿಗ್ವೇಕರ್ ಮತ್ತು ಮನೋಹರ್ ದುಂಡಪ್ಪ ಯಡವೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ, ಥರ್ಡ್ ಡಿಗ್ರಿ ಟ್ರೀಟ್​ಮೆಂಟ್​ ನೀಡುವುದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ. ಸರ್ಕಾರ ಹಾಗೂ ಪೊಲೀಸರು ಈ ಸಂಬಂಧ ಗಮನಹರಿಸಬೇಕು ಎಂದು ಹೇಳಿದೆ. ಗೃಹ ಇಲಾಖೆ, ಡಿಜಿ-ಐಜಿ, ಆರ್.ಆರ್‌.ನಗರ ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹೈಕೋರ್ಟ್ ನೋಟಿಸ್ ನೀಡಿದೆ. ಅಲ್ಲದೇ ಕಾಟನ್‌ಪೇಟೆ ಪೊಲೀಸ್​ ಇನ್ಸ್​ಪೆಕ್ಟರ್​ ಕುಮಾರಸ್ವಾಮಿ ಹಾಗೂ ಪೊಲೀಸ್​ ಇನ್ಸ್​ಪೆಕ್ಟರ್ ವಿ.ಮೂರ್ತಿಗೆ ತುರ್ತು ನೋಟಿಸ್ ನೀಡಿದೆ. ಅಲ್ಲದೇ ಅರ್ಜಿ ವಿಚಾರಣೆಯನ್ನು ಜೂ 18ಕ್ಕೆ ಹೈಕೋರ್ಟ್ ಮುಂದೂಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv