ಪಶು ಆಸ್ಪತ್ರೆಯಲ್ಲಿ ಎಸಿ ಕದ್ದೊಯ್ದ ಕಳ್ಳರು

ಮೈಸೂರು: ಕಳ್ಳರು ಸಾಮಾನ್ಯವಾಗಿ ದೇವಸ್ಥಾನ, ಜ್ಯುವೆಲ್ಲರಿ ಶಾಪ್​ನಲ್ಲಿ ಕಳ್ಳತನ ಮಾಡೋದನ್ನ ಕೇಳಿರುತ್ತೇವೆ. ಆದ್ರೆ ಇಲ್ಲೊಬ್ರು ಸಿದ್ದಲಿಂಗಪುರ ಪಶು ವೈದ್ಯಕೀಯ ಆಸ್ಪತ್ರೆಯ ಬಾಗಿಲು ಮುರಿದು ಎಸಿ ಕದ್ಯೊಯ್ದಿರುವ ಘಟನೆ ನಡೆದಿದೆ.
ಆಸ್ಪತ್ರೆಯ ಹಿಂಬಾಗಿಲನ್ನ ಕಲ್ಲಿನಿಂದ ಜಜ್ಜಿ ಒಳನುಗ್ಗಿದ ಖದೀಮರು, ಸುಮಾರು 40 ಸಾವಿರ ಮೌಲ್ಯದ ಎಸಿ ಯಂತ್ರವನ್ನು ಕದ್ಯೊಯ್ದಿದ್ದಾರೆ. ಕಳೆದ ಆಗಸ್ಟ್ 14 ರಂದು ಇದೇ ಆಸ್ಪತ್ರೆಯಲ್ಲಿ ಜೆರಾಕ್ಸ್ ಮೆಷಿನ್, ರೆಫ್ರಿಜರೇಟರ್ ಕಳುವಾಗಿತ್ತು. ಇದೀಗ ಮತ್ತೆ ಆಸ್ಪತ್ರೆಯಲ್ಲಿ ಎಸಿ ಕಳುವಾಗಿದೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪದೇ ಪದೇ ಕಳ್ಳತನವಾಗಿದ್ರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಸ್ಪತ್ರೆ ವೈದ್ಯ ಡಾ.ಚಂದ್ರಶೇಖರ್ ಆರೋಪಿಸಿದ್ದಾರೆ.