ಸಿಸಿಟಿವಿ ಕ್ಯಾಮರಾ ಕದ್ದು ತನ್ನ ಮನೆಗೆ ಫಿಕ್ಸ್​​ ಮಾಡಿದ ಕಳ್ಳ- ಓನರ್​ಗೆ ತಲುಪಿತು ಲೈವ್​ ಫುಟೇಜ್​​

ಚೀನಾ: ಕಳ್ಳರು ಕಳ್ಳತನ ಮಾಡಿ ಯಾರಿಗೂ ತಿಳಿಯದಂತೆ ಓಡಿಹೋಗಿದನ್ನು ನೋಡಿದ್ದೇವೆ. ಕೆಲವು ಕಳ್ಳರು ಸಾಕ್ಷ್ಯಗಳನ್ನು ಉಳಿಸದೇ ಕಳ್ಳತನ ಮಾಡಿ ಎಸ್ಕೇಪ್​ ಆಗಿರುತ್ತಾರೆ. ಆದರೇ ಇಲ್ಲೊಬ್ಬ ಕಳ್ಳ ಸಿಸಿಟಿವಿ ಕ್ಯಾಮರಾ ಕಳ್ಳತನ ಮಾಡಿ ತನ್ನ ಮನೆಯಲ್ಲಿ ಅಳವಡಿಸಿಕೊಂಡು, ಮಾಲೀಕನಿಗೆ ದೃಶ್ಯಾವಳಿಗಳನ್ನ ಲೈವ್​ ಸ್ಟ್ರೀಮಿಂಗ್​ ಮಾಡಿ ಸಿಕ್ಕಿಬಿದ್ದಿದ್ದಾನೆ.

ಚೀನಾದ ಶಾಂಘೈನ ಜಿಯಾಂಗ್ಸು​​ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳ್ಳನೊಬ್ಬ ಕಚೇರಿಗೆ ಹಾಕಿದ್ದ ಸಿಸಿಟಿವಿ ಕ್ಯಾಮರಾ ಕದ್ದಿದ್ದಾನೆ. ಕ್ಯಾಮರಾ ಕದ್ದ ನಂತರ ಮಾರಾಟ ಮಾಡದೇ ತನ್ನ ಮನೆಗೆ ಅಳವಡಿಕೆ ಮಾಡಿದ್ದಾನೆ. ಕಳ್ಳನಿಗೆ ತಿಳಿಯದಂತೆ ಬಟ್ಟೆ ಬದಲಾಯಿಸುವುದರಿಂದ ಹಿಡಿದು ಕ್ಯಾಮರಾದಲ್ಲಿ ರೆಕಾರ್ಡ್​​ ಆಗುತ್ತಿದ್ದ ಅಷ್ಟೂ ದೃಶ್ಯ ಮಾಲೀಕನಿಗೆ ರವಾನೆಯಾಗಿದೆ. ಕ್ಯಾಮರಾದ ಐಪಿ ವಿಳಾಸ ಬದಲಾವಣೆ ಮಾಡದೇ ಇರುವುದರಿಂದಾಗಿ ಇಷ್ಟೆಲ್ಲಾ ಆಗಿದೆ. ಕಳ್ಳ  ತನ್ನ ಕೆಡ್ಡ ತಾನೇ ತೋಡಿಕೊಂಡು ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಿಸಿಟಿವಿ ಕ್ಯಾಮರಾದ ಐಪಿ ವಿಳಾಸ ಬದಲಾವಣೆ ಮಾಡದ ಹಿನ್ನೆಲೆ ಕ್ಯಾಮರಾದಲ್ಲಿ ಸಂಗ್ರಹವಾದ ದೃಶ್ಯ ನೇರವಾಗಿ ಮಾಲೀಕನಿಗೆ ತಲುಪಿವೆ. ಮಾಲೀಕ ಬೇರೊಂದು ಮನೆಯಲ್ಲಿನ ದೃಶ್ಯಗಳನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳ ಸಹಾಯದಿಂದ ಕಳ್ಳನನ್ನು ಪೊಲೀಸರು ಸುಲಭವಾಗಿ ಪತ್ತೆ ಹಚ್ಚಿದ್ದಾರೆ. ತನ್ನ ಮನೆಯಲ್ಲಿ ಮಕ್ಕಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮರಾ ಕಳ್ಳತನ ಮಾಡಿದ್ದೆ. ಆದ್ರೆ ಅದರಿಂದ ಓನರ್​ಗೆ ಫುಟೇಜ್​​ ರವಾನೆಯಾಗ್ತಿದೆ ಅಂತ ಗೊತ್ತೇ ಇರಲಿಲ್ಲ ಎಂದು ಕಳ್ಳ ಪೊಲೀಸರಿಗೆ ಹೇಳಿದ್ದಾನೆ.

ಚೀನಿ ಸಾಮಾಜಿಕ ಮಾಧ್ಯಮಗಳಲ್ಲಿ ಕಳ್ಳನ ಪ್ರಸಂಗ ವೈರಲ್​ ಆಗಿದ್ದು, ಸಾರ್ವಜನಿಕರು ಈತನ ಮೂರ್ಖತನ ಕಂಡು ಬೆರಗಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv