ಮೊಬೈಲ್​ ಕದಿಯಲು ಹೋಗಿ, ​​ಮೈಮೇಲೆ ಶೆಲ್ಫ್ ಬೀಳಿಸಿಕೊಂಡ ಕಳ್ಳ..!

ಮಿಚಿಗನ್​: ಕಳ್ಳತನಕ್ಕೆ ಬರೋರು ಮೊದಲೇ ಒಂಚೂರು ಪ್ಲಾನ್ ಮಾಡಿಕೊಂಡೇ ಬರ್ತಾರೆ. ಆದ್ರೂ ಅದೃಷ್ಟ ಅನ್ನೋದು ಯಾವಾಗ ಹೆಂಗೆ ಮುಖ ತಿರುಗಿಸಿಕೊಳ್ಳುತ್ತೆ ಅನ್ನೋದನ್ನ ಹೇಳೋಕಾಗಲ್ಲ. ಹೀಗೇ ಅಮೆರಿಕಾದಲ್ಲೂ ಒಬ್ಬ ಖದೀಮನಿಗೆ ಅರ್ಧದಲ್ಲೇ ಕೈಕೊಟ್ಟ ಅದೃಷ್ಟ ಲಕ್ಷ್ಮಿ ಒಂಚೂರು ಯಡವಟ್ಟು ಮಾಡಿದ್ದಾಳೆ. ಆದ್ರೂ, ಪೂರ್ತಿಯಾಗಿ ಕೈ ಬಿಡದೇ ಪೊಲೀಸರಿಗೆ ತಲೆನೋವಾಗುವಂತೆಯೂ ಮಾಡಿದ್ದಾಳೆ.

ಕಳ್ಳನೊಬ್ಬ ಮೊಬೈಲ್​ ಶಾಪ್​ಗೆ ಕನ್ನ ಹಾಕಲು ಬಂದು ಡಿಸ್​ಪ್ಲೇ ಶೆಲ್ಫ್​ ತನ್ನ ಮೈಮೇಲೆ ಬೀಳಿಸಿಕೊಂಡಿದ್ದಾನೆ. ಈ ವಿಡಿಯೋವನ್ನ ಮಿಚಿಗನ್​ನ ವೆಸ್ಟ್​ಲ್ಯಾಂಡ್​ ಪೊಲೀಸರು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೊದಲು ಅಂಗಡಿ ಒಳನುಗಿದ್ದ ಕಳ್ಳ ಸಿಕ್ಕ ಸಿಕ್ಕ ಮೊಬೈಲ್​ಗಳನ್ನೆಲ್ಲ ಕೈಗೆತ್ತಿಕೊಳ್ಳುತ್ತಾನೆ. ಬಳಿಕ ಡಿಸ್​ಪ್ಲೇ ಶೆಲ್ಫ್​ ಒಳಗಿದ್ದ ಮೊಬೈಲ್ ಮೇಲೂ ಆಸೆಯಾಗಿ ಅದನ್ನು ಹೊರ ತೆಗೆಯುವಾಗ ಶೆಲ್ಫ್​ ಮೈಮೇಲೆ ಬೀಳಿಸಿಕೊಂಡಿದ್ದಾನೆ. ಆದ್ರೆ, ಖದೀಮ ತನ್ನ ಕೈಚಳಕ ತೋರಿಸಿ ಎಸ್ಕೇಪ್ ಆಗೋದ್ರಲ್ಲೂ ಯಶಸ್ವಿಯಾಗಿದ್ದಾನೆ.

ಈ ಕಳ್ಳನಿಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸ್ತಿದ್ದು, ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದರಲ್ಲಿರುವ ಕಳ್ಳ ಯಾರಿಗಾದ್ರೂ ಗೊತ್ತಿದ್ದರೆ, ಕಂಡರೆ ದಯವಿಟ್ಟು ಮಾಹಿತಿ ನೀಡಿ ಅಥವಾ ಹಿಡಿದುಕೊಡಿ ಅಂತ ಮನವಿ ಮಾಡಿದ್ದಾರೆ. ಪೊಲೀಸರು ಬಿಡುಗಡೆ ಮಾಡಿರೋ ವಿಡಿಯೋ ಈಗ ವೈರಲ್ ಆಗಿದ್ದು, ಜನರು ಕಳ್ಳನ ಪರಿಸ್ಥಿತಿ ನೋಡಿ ನಗಾಡ್ತಿದ್ದಾರೆ.

Westland MI – (April 2, 2019) The Westland Police request the public’s assistance in identifying a subject who broke into a cell phone store.The Westland Police are requesting the public’s assistance in identifying a subject shown on video during the commission of a burglary of the Metro PCS store located at 4683 S. Middlebelt Rd. The burglary occurred on March 4, 2019 at approximately 10:40 p.m.The subject is shown on video entering the store and stealing multiple cellular telephones. In one instance, he is seen attempting to pull a phone off of its security device causing the display to fall on top of him.The subject is described as a black male with pointed black facial hair on his chin. He was wearing a tan jacket, tan khaki type pants, a black knit cap with a white circular logo, and tan work boots. The subject is seen after re-entering the store without the jacket wearing a tan colored hooded sweatshirt with white writing on the front.If you have any information regarding this incident, or are able to identify the subject pictured in the video, please contact Detective Farrar at 734-467-7912. Ref: 19-9808

Posted by Westland Police Community Partnership on Tuesday, April 2, 2019