ಕಳ್ಳತನಕ್ಕೂ ಮುನ್ನ ಇವನು ಡ್ಯಾನ್ಸ್​ ಮಾಡಿದ್ದೇಕೆ…?

ದೆಹಲಿ: ಕಳ್ಳರು ಯಾವಾಗ್ಲೂ ಕಳ್ಳತನ ಮಾಡಬೇಕಾದ್ರೆ ಎಚ್ಚರಿಕೆಯಿಂದ ತಮ್ಮ ಕೆಲಸವನ್ನು ಯಾವುದೇ ಸದ್ದು ಗದ್ದಲ ಇಲ್ದೇ ಮಾಡಿ ಮುಗಿಸ್ತಾರೆ. ಆದ್ರೆ ಇಲ್ಲೊಬ್ಬ ಕಳ್ಳ, ಕಳ್ಳತನಕ್ಕೂ ಮುನ್ನ ಭರ್ಜರಿಯಾಗಿ ಒಂದೆರಡು ಸ್ಟೆಪ್ಸ್‌ ಹಾಕಿ ನಂತ್ರ ಕಳ್ಳತನಕ್ಕೆ ಇಳಿದಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ತನ್ನ ಇಬ್ಬರು ಸ್ನೇಹಿತರೊಡನೆ ಅಂಗಡಿಯಲ್ಲಿ ಕಳ್ಳತನ ಮಾಡಲು ಬಂದ ಕಳ್ಳ, ಅಂಗಡಿಯ ಶೆಟರ್‌ ಎತ್ತುವ ಮುನ್ನ ಮೊದಲು ಡ್ಯಾನ್ಸ್​ ಮಾಡಿದ್ದಾನೆ. ಡ್ಯಾನ್ಸ್​ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ವಿಡಿಯೋವನ್ನು ನೋಡಿದವರು ಟ್ವಿಟರ್​ನಲ್ಲಿ ಟ್ರೋಲ್‌ ಮಾಡಿದ್ದಾರೆ.