ಹಂಡೆ ಕದ್ದ, ಸಿಕ್ಕಿ ಬಿದ್ದ, ಧರ್ಮದೇಟೂ ತಿಂದ..!

ದಾವಣಗೆರೆ:​ ಜನ ಹಣಕ್ಕಾಗಿ ಬೈಕ್​ ಕದಿಯೋದು, ಬ್ಯಾಂಕ್​ಗೆ ಕನ್ನಾ ಹಾಕೋದು ಇಲ್ಲಾ ಯಾರದಾದ್ರೂ ತಲೆ ಹೊಡೆಯೋದು ಸಾಮಾನ್ಯ.​ ವಿಚಿತ್ರ ಅಂದ್ರೆ ಕೋಟಿ ಕೋಟಿ ಕೊಳ್ಳೆ ಹೋಡೆದೋರೇನೇ ಆರಾಮಾಗಿ ವಿದೇಶ ಸುತ್ತಾಡ್ಕೊಂಡ್​ ಇರೋಕೆ ಬಿಡೋ ನಮ್ಮ ಜನ, ಒಬ್ಬ ಚಿಕ್ಕ ಹಂಡೆ ಕಳ್ಳ ಸಿಕ್ಕಿಬಿಟ್ರೇ… ತಗಳಪ್ಪಾ.. ಹಿಂಗಾ ಮಾಡೋದು. ಹೌದು! ಇಲ್ಲೊಬ್ಬ ಅಸಾಮಿ ಕದ್ದಿದ್ದು ಒಂದು ಚಿಕ್ಕ ಹಂಡೆ ಅಷ್ಟೇ. ಅದಕ್ಕೇ, ಜನ ಅವನನ್ನು ಹಿಡ್ಕೊಂಡು ಹಿಗ್ಗಾಮುಗ್ಗಾ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಕೆ.ಬಿ ಕಾಲೋನಿಯಲ್ಲಿ ತಾಮ್ರದ ಹಂಡೆ ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಖದೀಮ ಬರ್ಕತ್(18) ಕೆಬಿ ಬಡಾವಣೆಯ ಸಿದ್ದಮ್ಮ ಪಾರ್ಕ್ ಬಳಿ ಶಾಂತಮ್ಮ ಎಂಬವರ ಮನೆಯ ಮುಂಭಾಗವಿದ್ದ ತಾಮ್ರದ ಹಂಡೆಯನ್ನು ಕದಿಯಲು ಹೋಗಿದ್ದ. ಪಾಪ! ಅವನ ನಸೀಬು ಚೆನ್ನಾಗಿರಲಿಲ್ಲಾ ಅನ್ಸುತ್ತೆ. ಈ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇನ್ನು ನಮ್ಮ ಜನ ಕಳ್ಳ ರೆಡ್​ಹ್ಯಾಂಡ್​ ಆಗಿ ಸಿಕ್ಕ ಅಂದ್ರೆ ಸುಮ್ನೆ ಬಿಡ್ತಾರಾ!? ನಂದೂ ಒಂದು ಇರಲಿ ಅಂತಾ ಒಂದೊಂದೇ ಧರ್ಮದೇಟು ಕೊಡ್ತಾ.. ಕೆಟಿಜೆ ನಗರ ಪೊಲೀಸ್​ ಠಾಣೆಗೆ ಒಪ್ಪಿಸಿಬಿಡ್ತಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv