ಬೀಗ ಮುರಿದು ಕಳ್ಳತನ ಮಾಡ್ತಿದ್ದ ಆರೋಪಿ ಅರೆಸ್ಟ್​

ಚಿತ್ರದುರ್ಗ: ಹಿರಿಯೂರು ನಗರದಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಪೀಣ್ಯ ಮೂಲದ ಪುನೀತ್ (23) ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಪುನೀತ್ ನಗರದ ಬಸವರಾಜಯ್ಯ ಎಂಬುವವರ ಮನೆ ದೋಚಿ ಪರಾರಿಯಾಗಿದ್ದ. ಬಂಧಿತನಿಂದ 2 ಚಿನ್ನದ ನಕ್ಲೆಸ್, 1ಮಾಂಗಲ್ಯ ಚೈನ್, 1ಮೊಬೈಲ್ ಮತ್ತು 1 ಬ್ಲಾಕ್ ಪಲ್ಸರ್ ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv