ತಿಂದು ತಿಂದು ದಪ್ಪ ಆಗ್ತಿದ್ದೀನಿ ಅನ್ನೋ ಚಿಂತೆನಾ.. ಫ್ಯಾಟ್​ ಆಗ್ಬಾರ್ದು ಏನ್ಮಾಡಬೇಕು..?

ಕೆಲವೊಮ್ಮೆ ಕೆಲಸ ಮಾಡ್ತಾ ಇದ್ರೂ, ಮನೆಯಲ್ಲಿ ಸುಮ್ನೆ ಕೂತಿದ್ರೂ ಏನಾದ್ರೂ ತಿಂತಾನೇ ಇರಬೇಕು ಅನ್ಸುತ್ತೆ. ಬೇಡ ಬೇಡ ಅಂದ್ರೂ ಟೇಸ್ಟಿ ಟೇಸ್ಟಿ ಫುಡ್​ ಕಡೆ ನಮ್ಮ ಮನಸ್ಸು ಸೆಳೆಯುತ್ತಿರುತ್ತೆ. ಬಾಯಿ ರುಚಿಗೆ ಅಂತಾ ಪಿಜ್ಜಾ, ಬರ್ಗರ್​ ಚಾಕಲೇಟ್​, ಪಾಪ್​ಕಾರ್ನ್​ ತಿಂದ್ರೆ ಅದು ಹೆಲ್ದಿ ಫುಡ್​ ಆಗಿರಲ್ಲ. ಬದಲಾಗಿ ನಿಮ್ಮ ತೂಕ ಹೆಚ್ಚಾಗೋಕೆ ಕಾರಣ ಆಗಬಹುದು. ಆದ್ರೆ ತೂಕ ಹೆಚ್ಚಾಗುತ್ತೆ ಅಂತಾ ಆಸೆಯನ್ನು ಹೆಚ್ಚು ಕಟ್ಟಿಡೋಕು ಆಗಲ್ಲ ಅಲ್ವಾ? ಅದಕ್ಕಾಗಿ ನೀವು ಕೆಲವೊಂದು ಹೆಲ್ದಿ ಸ್ನ್ಯಾಕ್ಸ್​ ಸೇವಿಸಬಹುದು. ಅದಕ್ಕಾಗೆ ಕೆಲವೊಂದು ಪ್ರೊಟೀನ್ ಬಾರ್​ಗಳ ಬಗ್ಗೆ ನಿಮಗೆ ಮಾಹಿತಿಯನ್ನ ನೀಡುತ್ತೇವೆ. ಇದು ತಯಾರಿಸಲು ಸುಲಭವಾಗಿದ್ದು, ರುಚಿಕರವಾಗಿರುತ್ತೆ. ಜೊತೆಗೆ ನಿಮ್ಮ ಹಸಿವನ್ನ ಕಡಿಮೆ ಮಾಡಿ ಮೆಟಾಬಲಿಸಂ ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ತೂಕವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

1. ಪೀ ನಟ್​ ಬಟರ್​ ಪ್ರೊಟೀನ್ ಬಾರ್:
ಪೀ ನಟ್​ ಬಟರ್​ ಪ್ರೊಟೀನ್ ಬಾರ್​ನಲ್ಲಿ ಪ್ರೊಟೀನ್​ ಅಂಶ ಸಮೃದ್ಧವಾಗಿದ್ದು, ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದರಲ್ಲಿ ಆರೋಗ್ಯಕರ ಕೊಬ್ಬಿನಾಂಶಗಳಿದ್ದು, ಕಡಿಮೆ ಕ್ಯಾಲೋರಿಯಿಂದ ಕೂಡಿದೆ. ಕಡಲೆಕಾಯಿ ಜೊತೆಗೆ ಗೋಡಂಬಿ, ವಾಲ್​ನಟ್ ಚಿಯಾ ಸೀಡ್ಸ್​ ಮತ್ತು ಅಗಸೆ ಬೀಜಗಳನ್ನು ಸೇರಿಸಿಕೊಳ್ಳಬಹುದು.

2. ಕ್ವಿನೋ ಮತ್ತು ಚಿಯಾ ಬೀಜ ಪ್ರೊಟೀನ್ ಬಾರ್
ಕ್ವಿನೋ, ಪ್ರೊಟೀನ್​ನ ಅದ್ಭುತ ಮೂಲವಾಗಿದೆ, ಏಕೆಂದರೆ ಇದರಲ್ಲಿ ಅಗತ್ಯವಾದ ಅಮೈನೊ ಆ್ಯಸಿಡ್​ ಹೆಚ್ಚಾಗಿದ್ದು, ಸಸ್ಯಾಹಾರಿಗಳು ಮತ್ತು ವೆಗನ್​ ಡಯೆಟ್​ ಮಾಡುವವರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ. ಕ್ವಿನೋ ಸೀಡ್ಸ್​ ಜೊತೆ ಚಿಯಾ ಬೀಜಗಳನ್ನು ಹುರಿದು. ತೆಂಗಿನ ಕಾಯಿಯಿಂದ ತಯಾರಿಸಿದ ಸಕ್ಕರೆ ಅಥವಾ ಬೆಲ್ಲ ಸೇರಿಸಿ, ಎಲ್ಲಾ ಪದಾರ್ಥಗಳನ್ನು ಮಿಶ್ರಮಾಡಿ ಮತ್ತು ಅದನ್ನು ಮ್ಯಾರಿನೇಟ್​ ಆಗಲು ಫ್ರಿಜ್​ನಲ್ಲಿ ಇಡಿ. ಸ್ವಲ್ಪ ಸಮಯದ ನಂತರ ಸೇವಿಸಿ.

3. ಅಗಸೆ ಬೀಜಗಳು ಮತ್ತು ಬಾದಾಮಿ ಬೆಣ್ಣೆ ಪ್ರೊಟೀನ್ ಬಾರ್
ಅಗಸೆ ಬೀಜಗಳು ಅತ್ಯಂತ ಆರೋಗ್ಯಕರವಾಗಿದ್ದು, ನಿಮ್ಮ ಊಟದಲ್ಲಿ ಅರಾಮಾಗಿ ಸೇರಿಸಿಕೊಳ್ಳಬಹುದು. ಇದರಲ್ಲಿ ಆರೋಗ್ಯಕರ ಕೊಬ್ಬುಗಳು, ಪ್ರೊಟೀನ್​ಗಳು ಮತ್ತು ಅಗತ್ಯ ವಿಟಮಿನ್​ಗಳು ಹಾಗೂ ಖನಿಜಾಂಶಗಳು ಸಮೃದ್ಧವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ.

4. ಹುರಿದ ಓಟ್ಸ್ ಮತ್ತು ವಾಲ್​​ನಟ್ಸ್ ಪ್ರೊಟೀನ್ ಬಾರ್
ಓಟ್ಸ್ ಪ್ರೊಟೀನ್​ನ ಉತ್ತಮ ಮೂಲವಾಗಿದ್ದು, ಡಯೆಟರಿ ಫೈಬರ್​ ಅಂಶವನ್ನ ಒಳಗೊಂಡಿದೆ. ಇದು ನಿಮ್ಮ ಹಸಿವನ್ನ ಬಹಳ ಹೊತ್ತು ಹಿಡಿದಿಡಲು ಸಹಾಯ ಮಾಡುತ್ತದೆ. ಜೊತೆಗೆ ಡೈಜೇಶನ್​ ಉತ್ತಮಗೊಳಿಸುತ್ತದೆ. ವಾಲ್​ನಟ್​ನಲ್ಲಿ ಆರೋಗ್ಯಕರ ಹಾಗೂ ರುಚಿಕರವಾದ ಡ್ರೈಫ್ರೂಟ್​ ಆಗಿದ್ದು, ಒಮೆಗಾ -3 ಫ್ಯಾಟಿ ಆಸಿಡ್​, ಆ್ಯಂಟಿ ಆಕ್ಸಿಡೆಂಟ್​ ಅಂಶಗಳನ್ನ ಒಳಗೊಂಡಿದೆ. ಇದು ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬೆಲ್ಲ ಅಥವಾ ತೆಂಗಿನ ಸಕ್ಕರೆ ಜೊತೆಗೆ ಹುರಿದ ಓಟ್ಸ್​ ಹಾಗೂ ವಾಲ್​ನಟ್​ ಸೇರಿಸಿ ಮಿಶ್ರ ಮಾಡಿ, ಬಾರ್​ ಹದಕ್ಕೆ ಮಿಶ್ರ ಮಾಡಿಕೊಂಡು ಸೇವಿಸಬಹುದು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv