ಧೂಮಪಾನಕ್ಕಿಂತಲೂ ಹೆಚ್ಚು ಅಪಾಯಕಾರಿ ಈ ಮೂರು ಡಯಟ್‌..!

ಇತ್ತೀಚಿನ ದಿನಗಳಲ್ಲಿ ಹಣ್ಣು, ತರಕಾರಿ, ಧಾನ್ಯಗಳನ್ನು ಹೆಚ್ಚಾಗಿ ಸೇವಿಸುವವರ ಪ್ರಮಾಣ ಕಡಿಮೆಯಾಗಿದೆ. ಇದರ ಬದಲಾಗಿ, ಹೆಚ್ಚು ಸಕ್ಕರೆಯುಕ್ತ ಪಾನೀಯಗಳನ್ನು, ಹೆಚ್ಚು ಉಪ್ಪು ಸಂಸ್ಕರಿಸಿದ ಮಾಂಸವನ್ನು ಸೇವಿಸುತ್ತಾರೆ. ಅನಾರೋಗ್ಯಕರ ಆಹಾರ ಕ್ರಮ, ಕೇವಲ ಆರೋಗ್ಯಕ್ಕೆ ಮಾತ್ರ ಹಾನಿ ಉಂಟು ಮಾಡುವುದಿಲ್ಲ. ಸಮಯಕ್ಕೆ ಮುಂಚಿತವಾಗಿ ಅಪಾಯವನ್ನು ತಂದೊಡ್ಡುತ್ತದೆ. ಹೊಸ ಅಧ್ಯಯನದ ವರದಿ ಪ್ರಕಾರ, ಅನಾರೋಗ್ಯಕರ ಕಳಪೆ ಆಹಾರದಿಂದ ಪ್ರಪಂಚದಲ್ಲಿ ಸಾವನ್ನಪ್ಪುವರ ಸಂಖ್ಯೆ ಹೆಚ್ಚಿದೆ. ಧೂಮಪಾನಕ್ಕಿಂತಲೂ ಅನಾರೋಗ್ಯ ಉಂಟು ಮಾಡುವ ಆಹಾರ ಹೆಚ್ಚು ಅಪಾಯಕಾರಿ ಆಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಇಂಟರ್‌ನ್ಯಾಷನಲ್ ಮೆಡಿಕಲ್ ಜರ್ನಲ್‌ ಹಾಗೂ ಲ್ಯಾನ್ಸೆಟ್‌ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಸಂಶೋಧಕರು ಸಮೀಕ್ಷೆಯ ಡೇಟಾ ಬಳಸಿಕೊಂಡು 195 ದೇಶದ ಜನರ ಆಹಾರ ಕ್ರಮವನ್ನು ವಿಶ್ಲೇಷಿಸಿದ್ದಾರೆ. ಇದರ ಜತೆಗೆ ಸೇಲ್ಸ್ ಡೇಟಾ, ಹಾಗೂ ಖರ್ಚಿನ ದತ್ತಾಂಶವನ್ನು ಕೂಡಾ ಸಂಗ್ರಹಿಸಲಾಗಿದೆ. ಕಳಪೆಮಟ್ಟದ ಆಹಾರ ಸೇವನೆಯಿಂದ ಹೃದಯ ಕಾಯಿಲೆ, ಕ್ಯಾನ್ಸರ್ ಮತ್ತು ಮಧುಮೇಹ ರೋಗಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚು. ಇದರಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಪಂಚದ ಬಹು ಪಾಲು ರಾಷ್ಟ್ರಗಳಲ್ಲಿ ಹೆಚ್ಚಿನ ಸಾವು ಸಂಭವಿಸಲು ಕಳಪೆ ಆಹಾರ ಕೂಡಾ ಪ್ರಮುಖ ಕಾರಣವೆಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ತಂಬಾಕು, ಹಾಗೂ ಧೂಮಪಾನಕ್ಕಿಂತಲೂ ಅನಾರೋಗ್ಯಕರ ಆಹಾರ ಕ್ರಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಹೆಲ್ತ್ ಮೆಟ್ರಿಕ್ಸ್ ಮತ್ತು ಇವಾಲ್ಯೂಷನ್ ಸಂಸ್ಧೆಯ ಲೇಖಕ ಅಷ್ಕಾನ್ ಅಭಿಪ್ರಾಯಪಟ್ಟಿದ್ದಾರೆ.

ಇಂಟರ್‌ನ್ಯಾಷನಲ್ ಮೆಡಿಕಲ್ ಜರ್ನಲ್‌ ಪ್ರಕಟವಾದ ಮತ್ತೊಂದು ಅಧ್ಯಯನ ಪ್ರಕಾರ, ಅನಾರೋಗ್ಯಕರ ಆಹಾರ ಮನುಷ್ಯನ ಆರೋಗ್ಯದ ಮೇಲೆ ಹೇಗೆ ಪರಿಣಾಮದ ಬೀರುತ್ತದೆ? ಎಂದು ತಿಳಿಯಲು ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಸುಮಾರು 40 ದೇಶಗಳ 130 ವಿಜ್ಞಾನಿಗಳು ಪಾಲ್ಗೊಂಡು, ಈ ಅಧ್ಯಯನ ನಡೆಸಿದ್ದಾರೆ. 2017ರಲ್ಲಿ ಕಳಪೆ ಆಹಾರದ ಕಾರಣದಿಂದಾಗಿ ಶೇ.22 ರಷ್ಟು ಸಾವು ಸಂಭವಿಸಿವೆ ಎಂದು ವರದಿಯಾಗಿದೆ. ವರದಿ ಪ್ರಕಾರ, ಇದಕ್ಕೆ ಕಾರಣ, ಡಯಟ್‌ನಲ್ಲಿ ಆರೋಗ್ಯಕರ ಆಹಾರದ ಕೊರತೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಈ ಮೂರು ಅಂಶಗಳು ನಮ್ಮ ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸುತ್ತವೆ.

1 ಆಹಾರದಲ್ಲಿ ಧ್ಯಾನ್ಯಗಳ ಕೊರತೆ
2. ಕಡಿಮೆ ಹಣ್ಣುಗಳ ಬಳಕೆ
3 ಡಯಟ್‌ನಲ್ಲಿ ಸೋಡಿಯಂ ಪ್ರಮಾಣ ಹೆಚ್ಚಳವಾಗುವುದು

ಕೆಂಪು ಮಾಂಸ, ಸಂಸ್ಕರಿತ ಮಾಂಸ, ಸಕ್ಕರೆ, ಪಾನೀಯ, ಟ್ರಾನ್ಸ್ ಫ್ಯಾಟಿ ಆ್ಯಸಿಡ್ ಮುಂತಾದವುಗಳ ಸೇವನೆಯಿಂದ ಹೆಚ್ಚಿನ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಅನಾರೋಗ್ಯಕರ ಆಹಾರವನ್ನು ಅವಲಂಬಿಸಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಡಯಟ್‌ನಲ್ಲಿ ಹೆಚ್ಚು ಹೆಚ್ಚು ಆರೋಗ್ಯಕರ ಆಹಾರವನ್ನು ಅಳವಡಿಸಿಕೊಂಡ್ರೆ ಮುಂದೆ ಸಂಭವಿಸುವ ಅಪಾಯವನ್ನು ತಡೆಗಟ್ಟಬಹುದು ಎನ್ನಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv