ಭಾರತದಲ್ಲಿ ಇಂಟರ್‌ನೆಟ್ ಬಂದ್​​​​ ಆಗುವುದಿಲ್ಲವಂತೆ..!

ನವದೆಹಲಿ: ‘ಇನ್ನೆರಡು ದಿನ ವಿಶ್ವದಾದ್ಯಂತ ನೆಟ್​ ಸಿಗಲ್ವಂತೆ..!’ ಎಂಬ ಸುದ್ದಿಗೆ ಗುದ್ದು ಕೊಡುವಂತೆ ದೇಶದ ಸೈಬರ್​ ಸೆಕ್ಯುರಿಟಿಯ ಉನ್ನತ ಅಧಿಕಾರಿಯೊಬ್ಬರು ಅಂಥದ್ದೇನೂ ಆಗೋಲ್ಲ. ದೇಶದಲ್ಲಿ ಇಂಟರ್‌ನೆಟ್ ಸೇವೆ ಅನುಕ್ಷಣವೂ ಅಬಾಧಿತವಾಗಿ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ.

ಮೈಂಟೆನೆನ್ಸ್ ಕಾರಣದಿಂದಾಗಿ ಮುಂದಿನ 2 ದಿನಗಳ ಕಾಲ ಇಡೀ ವಿಶ್ವದಲ್ಲೇ ಇಂಟರ್‌ನೆಟ್ ಲಭ್ಯವಿರೋದಿಲ್ಲ ಎಂದು ಜಾಗತಿಕ ಇಂಟರ್‌ನೆಟ್ ಕಾರ್ಪೋರೇಶನ್ ಸಂಸ್ಥೆಯನ್ನು (ICANN) ಉಲ್ಲೇಖಿಸಿ, ಮಾಧ್ಯಮಗಳು ಬೆಳಗ್ಗೆಯಿಂದ ವರದಿ ಮಾಡಿದ್ದವು.

ಈ ನಿಟ್ಟಿನಲ್ಲಿ ಎಲ್ಲ ಏರ್ಪಾಡುಗಳನ್ನೂ ಮಾಡಿಕೊಳ್ಳಲಾಗಿದೆ. ಇಂಟರ್‌ನೆಟ್ ಷಟ್ ಡೌನ್​ ಆಗುವುದಿಲ್ಲ ಎಂದು ರಾಷ್ಟ್ರೀಯ ​​ಸೈಬರ್​ ಸೆಕ್ಯುರಿಟಿಯ ಸಂಯೋಜಕ ಗುಲ್ಷನ್​ ರೈ ಸ್ಪಷ್ಟಪಡಿಸಿದ್ದಾರೆ.

ಈ ನಿಟ್ಟಿನಲ್ಲಿ, ಸಿಂಗಾಪುರ ಮೂಲದ ಇಂಟರ್ನೆಟ್​ ಕಾರ್ಪೊರೇಶನ್​ ಆಫ್​ ಅಸೈನ್ಡ್​ ನೇಮ್ಸ್​ ಅಂಡ್ ನಂಬರ್ಸ್​ (ICANN) ಸಹ ಪ್ರತಿಕ್ರಿಯೆ ನೀಡಿದ್ದು, ಭಾರೀ ಪ್ರಮಾಣದಲ್ಲೇನೂ ತೊಂದರೆ ಆಗದು. ಸ್ವಲ್ಪಮಟ್ಟಿಗೆ ಅಲ್ಲಲ್ಲಿ ತೊಂದರೆ ಎದುರಾಗಲಿದೆ ಎಂದು ಸ್ಪಷ್ಟನೆ ನಿಡಿದೆ. ಗಮನಾರ್ಹವೆಂದರೆ ಈಗಾಗಲೇ ICANN ಇಂಟರ್‌ನೆಟ್ ಷಟ್ ಡೌನ್ ಎಚ್ಚರಿಕೆ ನೀಡಿ ಒಂದು ದಿನ ಕಳೆದಿದ್ದು, ಎಲ್ಲೂ ಮೇಜರ್​ ಅನ್ನುವಂತಹಾ ಅನಾಹುತವೇನೂ ಆಗಿಲ್ಲ ಎಂದು ತಿಳಿದುಬಂದಿದೆ.